ಭಾರತ, ಮೇ 5 -- ತಾಪಮಾನ ಏರಿಕೆ ಹಾಗೂ ತೇವಾಂಶದ ಕಾರಣದಿಂದ ಬೇಸಿಗೆಯಲ್ಲಿ ಎಣ್ಣೆ ಚರ್ಮವನ್ನು ನಿರ್ವಹಿಸುವುದು ಸವಾಲು. ಎಣ್ಣೆ ಚರ್ಮದ ಕಾರಣದಿಂದ ಮುಖದಲ್ಲಿ ಮೊಡವೆ, ಕಲೆಗಳು ಉಂಟಾಗಬಹುದು. ಆದರೆ ನಮ್ಮ ದೈನಂದಿನ ಬದುಕಿನಲ್ಲಿ ಚರ್ಮದ ಆರೈಕೆಗೆ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ತ್ವಚೆಯ ಅಂದ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೆಚ್ಚುವರಿ ಎಣ್ಣೆ, ಕೊಳಕು, ಬೆವರನ್ನು ಸ್ವಚ್ಛ ಮಾಡಲು ಎಣ್ಣೆಮುಕ್ತ ಕ್ಲೆನ್ಸರ್‌ನಿಂದ ಬೆಳಿಗ್ಗೆ ಮತ್ತು ರಾತ್ರಿ ಸ್ವಚ್ಛ ಮಾಡಿ. ಸನ್‌ಸ್ಕ್ರೀನ್‌ ವರ್ಷಪೂರ್ತಿ ಅವಶ್ಯಕವಾಗಿದೆ. ಆದರೆ ಬೇಸಿಗೆಯ ದಿನಗಳಲ್ಲಿ ಯುವಿ ವಿಕರಣವು ಪ್ರಬಲವಾಗಿರುವ ಬೇಸಿಗೆಯಲ್ಲಿ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದು ಅವಶ್ಯ. ಬೇಸಿಗೆಯಲ್ಲಿ ಈ ಎಲ್ಲಾ ಅಂಶಗಳು ತ್ವಚೆಯ ಅಂದ ಹೆಚ್ಚಲು ನಮಗೆ ನೆರವಾಗಬಹುದು. ಬೇಸಿಗೆಯಲ್ಲಿ ಎಣ್ಣೆ ಚರ್ಮದ ಆರೈಕೆಗೆ ಈ ಸಲಹೆಗಳನ್ನು ಪಾಲಿಸಿ.

ಎಣ್ಣೆ ಚರ್ಮದವರು ಬೇಸಿಗೆಯಲ್ಲಿ ಅನುಸರಿಸಬೇಕಾದ ಕ್ರಮಗಳಿವು

ಆವೆ ಮಣ್ಣು ಅಥವಾ ಮುಲ್ತಾನಿ ಮಿಟ್ಟಿಯಂತಹ ವಸ್ತಗಳಿಂದ ಮಾಸ್ಕ್‌ ತಯಾರಿಸಿ. ಮ...