Bengaluru, ಫೆಬ್ರವರಿ 24 -- ಸದಾ ಹೈಡ್ರೇಟೆಡ್ ಆಗಿರುವುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಸರಳ ಮತ್ತು ಪ್ರಮುಖ ವಿಧಾನವಾಗಿದೆ. ಒಟ್ಟಾರೆ ಆರೋಗ್ಯಕ್ಕೆ ಹೈಡ್ರೇಷನ್ ಅತ್ಯಗತ್ಯ. ಏಕೆಂದರೆ ದೇಹದ ಪ್ರತಿಯೊಂದು ಕಾರ್ಯದಲ್ಲೂ ನೀರು ನಿರ್ಣಾಯಕ ಪಾತ್ರ ವಹಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಹೈಡ್ರೇಟೆಡ್ ಆಗಿರುವುದು ಬಹಳ ಮುಖ್ಯ. ಏಕೆಂದರೆ ಹೆಚ್ಚಿನ ತಾಪಮಾನ ಮತ್ತು ಅಧಿಕ ಬೆವರುವಿಕೆ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ನೀರು ಕುಡಿಯದೇ ಇರುವುದರಿಂದ ದೇಹದಲ್ಲಿ ನೈಸರ್ಗಿಕ ಕಾರ್ಯಚಟುವಟಿಕೆಗೆ ಸಮಸ್ಯೆ ಎದುರಾಗಬಹುದು, ಅಲ್ಲದೇ, ಆರೋಗ್ಯ ಸಮಸ್ಯೆಗಳು ಕೂಡ ಎದುರಾಗಬಹುದು. ಹೀಗಾಗಿ ಹೆಚ್ಚಿನ ಪ್ರಮಾಣದ ನೀರು ಕುಡಿಯುವುದು ಅಗತ್ಯ. ಹಾಗಾದರೆ ಹೈಡ್ರೇಟೆಡ್ ಆಗಿ ಇರುವುದು ಏಕೆ ಮುಖ್ಯ? ಇಲ್ಲಿದೆ ನಿಮಗೆ ತಿಳಿದಿರದ ಹಲವು ಮಾಹಿತಿ..

ಬಿಸಿ ತಾಪಮಾನವು ನಿಮ್ಮನ್ನು ಹೆಚ್ಚು ಬೆವರುವಂತೆ ಮಾಡುತ್ತದೆ. ನೀವು ನೀರು ಅಥವಾ ಯಾವುದೇ ದ್ರವ ಪದಾರ್ಥಗಳನ್ನು ತೆಗೆದುಕೊಳ್ಳದಿದ್ದರೆ ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ನಿರ್ಜಲೀಕರಣವು ...