ಭಾರತ, ಮಾರ್ಚ್ 12 -- Side Effects of Cold Water: ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಜೋರಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲು ಜೋರಾಗಿದೆ. ಬಿಸಿಗಾಳಿ ಕೂಡ ಬೀಸುತ್ತಿದೆ. ಇದರಿಂದ ಜನ ಜೀವನ ತತ್ತರಿಸುತ್ತಿದೆ. ಈ ಸಮಯದಲ್ಲಿ ದೇಹವನ್ನು ತಂಪಾಗಿ ಇರಿಸಿಕೊಳ್ಳುವುದು ಹಾಗೂ ದೇಹ ನಿರ್ಜಲೀಕರಣವಾಗದಂತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬಿಸಿಲಿನ ತಾಪ ಜೋರಾದಾಗ ತಣ್ಣನೆಯ ನೀರು ಅಥವಾ ಪಾನೀಯ ಬೇಕು ಎಂದು ದೇಹ ಬಯಸುವುದು ಸಹಜ.

ತಣ್ಣನೆಯ ನೀರು ಅಥವಾ ಕೋಲ್ಡ್ ನೀರು ಕುಡಿಯುವುದರಿಂದ ದೇಹಕ್ಕೆ ಉಲ್ಲಾಸ ಮೂಡುತ್ತದೆ. ಆದರೆ ಬೇಸಿಗೆ ಅಂತ ಅತಿಯಾಗಿ ಫ್ರಿಜ್‌ನಲ್ಲಿರುವ ನೀರು ಕುಡಿದರೆ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರೋದು ಖಂಡಿತ. ಬೇಸಿಗೆಯಲ್ಲಿ ಫ್ರಿಜ್ ನೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ನೋಡಿ.

ಫ್ರಿಜ್‌ನಲ್ಲಿ ಇಟ್ಟಿರುವ ಅತಿ ತಣ್ಣಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆ ನಿಧಾನವಾಗಬಹುದು. ತುಂಬಾ ತಣ್ಣನೆಯ ದ್ರವಾಹಾರಗಳನ್ನು ಸೇವಿಸಿದಾಗ ದೇಹವು...