Bengaluru, ಮಾರ್ಚ್ 10 -- ಹೀಟ್ ಸ್ಟ್ರೋಕ್ ಎಂದೂ ಕರೆಯಲ್ಪಡುವ ಸನ್ ಸ್ಟ್ರೋಕ್, ಹೆಚ್ಚಿನ ತಾಪಮಾನ ಮತ್ತು ನೇರ ಸೂರ್ಯನ ಬೆಳಕಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಉಂಟಾಗುವ ಸಮಸ್ಯೆಯಾಗಿದೆ. ದೇಹದ ತಾಪಮಾನ ನಿಯಂತ್ರಣ ವ್ಯವಸ್ಥೆಯು ವಿಫಲವಾದಾಗ ಇದು ಸಂಭವಿಸುತ್ತದೆ. ಹೈಡ್ರೇಟ್ ಆಗಿ ಉಳಿಯುವುದು, ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು, ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವುದು ಮತ್ತು ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವುದು ಗಂಭೀರ ಪರಿಣಾಮಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಇಲ್ಲಿ ತಜ್ಞವೈದ್ಯರು ನೀಡಿರುವ ಮಾಹಿತಿಯು ಸನ್ ಸ್ಟ್ರೋಕ್‌‌ಗೆ ಕಾರಣಗಳು, ಅದರ ರೋಗಲಕ್ಷಣಗಳು, ತಡೆಗಟ್ಟುವ ವಿಧಾನಗಳು ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಹೆಚ್ಚಿನ ವಿವರ ನೀಡುತ್ತದೆ.

ಅಧಿಕ ದೇಹದ ಉಷ್ಣತೆ (104degF ಅಥವಾ 40degC ಗಿಂತ ಹೆಚ್ಚು)

ಬಿಸಿಯಾದ, ಶುಷ್ಕ, ಅಥವಾ ಕೆಂಪಾದ ಚರ್ಮ

ವೇಗದ ಹೃದಯ ಬಡಿತ ಮತ್ತು ಉಸಿರಾಟ

ತಲೆತಿರುಗುವಿಕೆ ಅಥವಾ ದಿಗ್ಭ್ರಮೆ

ವಾಕರಿಕೆ ಮತ್ತು ವಾಂತಿ

ಸ್ನಾಯು ದೌರ್ಬಲ್ಯ ...