Bangalore,mysuru, ಏಪ್ರಿಲ್ 2 -- Summer Special Trains: ಈಗಾಗಲೇ ಬೇಸಿಗೆ ರಜೆಗಳು ಶುರುವಾಗಿದ್ದು, ಜನ ಬೇರೆ ಬೇರೆ /ಊರುಗಳಿಗೆ ಕುಟುಂಬ ಸಮೇತ ರಜೆ ಪ್ರವಾಸ ಕೈಗೊಂಡಿದ್ದಾರೆ. ಜನರ ಬೇಡಿಕೆಗೆ ಅನುಗುಣವಾಗಿ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆಯು ಕರ್ನಾಟಕದಿಂದ ವಿವಿಧ ವಿಶೇಷ ರೈಲುಗಳ ಸೇವೆಯನ್ನು ಬೇಸಿಗೆಗೆ ಶುರು ಮಾಡಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ರೈಲ್ವೆ ಮಂಡಳಿ ಬೇಸಿಗೆ ಅವಧಿಯಲ್ಲಿ ವಿಶೇಷ ರೈಲುಗಳ ಓಡಾಟಕ್ಕೆ ಅನುಮೋದನೆ ನೀಡಿದೆ.ಪ್ರತಿ ನಿಲ್ದಾಣದಲ್ಲಿ ವಿವರವಾದ ಆಗಮನ ಮತ್ತು ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ಸೈಟ್ www.enquiry.indianrail.gov.in ಪರಿಶೀಲಿಸಿ, NTES ಅಪ್ಲಿಕೇಶನ್ ಬಳಸಿ ಅಥವಾ 139 ಅನ್ನು ಡಯಲ್ ಮಾಡಲು ವಿನಂತಿಸಲಾಗಿದೆ.

I. ರೈಲು ಸಂಖ್ಯೆ 06281/06282 ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್‌ ಬೇಸಿಗೆ ವಿಶೇಷ (ಒಟ್ಟು 11 ಟ್ರಿಪ್ ಗಳು):

* ರೈಲು ಸಂಖ್ಯೆ 06281: ಮೈಸೂರಿನಿಂದ ಪ್ರತಿ ಶನಿವಾರ ಏಪ್ರಿಲ್ (5,12,19, 26), ಮೇ (3,1...