Bengaluru, ಫೆಬ್ರವರಿ 25 -- ಬೇಸಿಗೆಯ ಸಂದರ್ಭದಲ್ಲಿ ಚರ್ಮದ ಬಗ್ಗೆ, ಮುಖದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಷ್ಟೂ ಸಾಲದು, ಸ್ವಲ್ವೇ ಉರಿ ಬಿಸಿಲು ಮೈಗೆ ತಾಕಿದರೆ ಅದರ ಪರಿಣಾಮ ಶೀಘ್ರದಲ್ಲೇ ಗೋಚರಿಸುತ್ತದೆ. ಅಲ್ಲದೆ, ಮುಖದ ಕಾಂತಿಯ ಬಗ್ಗೆ ಕಾಳಜಿ ವಹಿಸುವವರು ನೀವಾಗಿದ್ದರೆ, ಮುಖದಲ್ಲಿ ಹೇಗೆ ಬಿಸಿಲಿನಿಂದ ಚರ್ಮ ಕಪ್ಪಾಗಿದೆ ಎನ್ನುವುದು ಗೋಚರಿಸುತ್ತದೆ. ಹೀಗಾಗಿ ಹೆಚ್ಚಿನ ನೀರು ಕುಡಿಯುವುದು ಅಗತ್ಯವೋ, ಹಾಗೆಯೇ, ಸನ್‌ಸ್ಕ್ರೀನ್ ಬಳಸುವುದು ಕೂಡ ಅಗತ್ಯ. ಬೇಸಿಗೆಯಲ್ಲಿ ಸೂರ್ಯನ ಶಾಖ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿರುತ್ತದೆ. ದೀರ್ಘ ಕಾಲ ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳುವುದು ನಿಮ್ಮ ಚರ್ಮಕ್ಕೆ ಹಾನಿ ಮಾಡುತ್ತದೆ. ಅಕಾಲಿಕ ವಯಸ್ಸಾಗುವಿಕೆ ಮತ್ತು ಚರ್ಮದ ಮೇಲೆ ದೀರ್ಘಕಾಲೀನ ಹಾನಿಯನ್ನು ತಡೆಗಟ್ಟಲು ಯುವಿ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುವುದು ಅತ್ಯಗತ್ಯ. ಬೇಸಿಗೆಯಾದ್ಯಂತ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸಲು ಮತ್ತು ಹೊಳೆಯುವಂತೆ ಮಾಡಲು ಚರ್ಮದ ಆರೈಕೆ ಸಲಹೆಗಳು ಇಲ್ಲಿವೆ.

ಹಾನಿಕಾರಕ ಯುವಿ ಕಿರಣಗಳ ವಿ...