Mysuru, ಮಾರ್ಚ್ 19 -- ಕೊಡಗು-ಮೈಸೂರು- ಚಾಮರಾಜನಗರ ಜಿಲ್ಲೆಗಳಲ್ಲಿ ಹಂಚಿ ಹೋಗಿರುವ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ

ಎರಡು ದಿನದಿಂದ ಕೊಡಗು ಹಾಗೂ ಮೈಸೂರು ಜಿಲ್ಲೆ ಹಲವು ಭಾಗಗಳಲ್ಲಿ ಮಳೆಯಾಗಿದ್ದು ಅರಣ್ಯ ಪ್ರದೇಶದಲ್ಲಿ ತಂಪಿನ ವಾತಾವರಣ ಸೃಷ್ಟಿಸಿದೆ.

ಫೆಬ್ರವರಿಯಿಂದಲೇ ಕಾಡು ಒಣಗಿ ಬೆಂಕಿ ಆತಂಕ ಇರುವಾಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಳೆಗಾಗಿ ಪ್ರಾರ್ಥಿಸುತ್ತಾರೆ. ಈಗ ಮಳೆಯಾಗಿರುವುದರಿಂದ ಸದ್ಯದ ಮಟ್ಟಿಗೆ ಆತಂಕವಿಲ್ಲ ಎನ್ನುವುದು ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್‌ ಲಕ್ಷ್ಮಿಕಾಂತ ವಿವರಣೆ.

ಅದರಲ್ಲೂ ನೀರಿಲ್ಲದೇ ಜಲ ಮೂಲಗಳು ಒಣಗಿ ವನ್ಯಜೀವಿಗಳು ನೀರು ಹುಡುಕಿಕೊಂಡು ಬರುವ ಸನ್ನಿವೇಶ ಇರುತ್ತದೆ. ಮಳೆಯಾಗಿ ಅಲ್ಲಲ್ಲಿ ಕೆರೆ ಕಟ್ಟೆಗಳಿಗೆ ನೀರು ಹರಿದಿದೆ.

ಇನ್ನೇನು ಯುಗಾದಿಗೆ ಗಿಡ ಮರಗಳು ಚಿಗುರೊಡೆದು ಹಸಿರು ಋತು ಆರಂಭವಾಗಲಿದೆ. ಈಗ ಮಳೆ ಬಿದ್ದಿರುವುದರಿಂದ ಗಿಡ ಮರಗಳಿಗೂ ಇದು ಆಸರೆಯಾಗಲಿದೆ.

ಬೇಸಿಗೆ ವೇಳೆ ಮೂರ್ನಾಲ್ಕು ಮಳೆಯಾದರೂ ಬರುತ್ತವೆ. ಈ ಬಾರಿ...