Bengaluru, ಮಾರ್ಚ್ 28 -- ಬೇಸಿಗೆ ರಜೆಯನ್ನು ಮಕ್ಕಳು ಆನಂದಿಸಬೇಕು ನಿಜ, ಆದರೆ ಬದಲಾದ ಇಂದಿನ ಕುಟುಂಬ ಪದ್ಧತಿ ಮತ್ತು ನಗರ ಜೀವನಶೈಲಿಯಿಂದಾಗಿ ಹೊರಗಡೆ ಅವರಿಗೆ ಆಟವಾಡಲು, ಇತರ ಮಕ್ಕಳೊಂದಿಗೆ ಬೆರೆಯಲು ಅವಕಾಶ ಸಿಗುತ್ತಿಲ್ಲ. ಹೀಗಾಗಿ ಅಂತಹ ಸಂದರ್ಭದಲ್ಲಿ ಮಕ್ಕಳು ಸುಲಭದಲ್ಲಿ ಮನೆಯಲ್ಲೇ ಸಿಗುವ ಟಿವಿ, ಸ್ಮಾರ್ಟ್‌ ಫೋನ್, ಟ್ಯಾಬ್ಲೆಟ್‌, ಗೇಮಿಂಗ್‌ ಮೊರೆ ಹೋಗುತ್ತಾರೆ, ಆರಂಭದಲ್ಲಿ ಸಮಯ ಕಳೆಯಲು ಆರಂಭವಾಗುವ ಈ ಚಟುವಟಿಕೆ ಕ್ರಮೇಣ ಅವರಿಗೆ ಚಟವಾಗಿ ಪರಿಣಮಿಸುತ್ತದೆ. ಅಂತಹ ಸಂದರ್ಭದಲ್ಲಿ ಪಾಲಕರು ಎಚ್ಚರಿಕೆ ವಹಿಸಬೇಕು.

ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌‌‌‌ಫೋನ್‌‌‌‌ಗಳು ಮಕ್ಕಳ ಜೀವನದ ಪ್ರಮುಖ ಭಾಗವಾಗಿದೆ. ತಂತ್ರಜ್ಞಾನವು ಶೈಕ್ಷಣಿಕ ಪ್ರಯೋಜನಗಳನ್ನು ನೀಡುತ್ತದೆಯಾದರೂ, ಅತಿಯಾದ ಸ್ಕ್ರೀನ್ ಟೈಮ್ ಕಡಿಮೆ ದೈಹಿಕ ಚಟುವಟಿಕೆ, ಕಳಪೆ ಸಾಮಾಜಿಕ ಕೌಶಲ್ಯಗಳು ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು. ಅನೇಕ ಪೋಷಕರು ತಮ್ಮ ಮಕ್ಕಳನ್ನು ಸ್ಮಾರ್ಟ್ ಫೋನ್‌‌‌‌ಗಳಿಂದ ದೂರವಿರಿಸಲು ಮತ್ತು ಉತ್ಪಾದಕ ಚಟುವಟಿಕೆಗಳಲ್ಲಿ ...