Bengaluru, ಫೆಬ್ರವರಿ 28 -- ಮಕ್ಕಳಿಗೆ ಬೇಸಿಗೆ ಅಂದ್ರೆ ಬಹಳ ಸಂಭ್ರಮ. ರಜಾದಿನ, ಆಟ, ಮೋಜು, ಮಸ್ತಿ ಎಂದು ಬಿರು ಬಿಸಿಲಿನಲ್ಲಿ ಊಟ ತಿಂಡಿ ಎಲ್ಲಾ ಮರೆತು ಆದಷ್ಟು ಸಮಯ ಹೊರಾಂಗಣದಲ್ಲೇ ಕಳೆಯುತ್ತಾರೆ. ಆದರೆ ಇದು ಅವರ ಸಾಕಷ್ಟು ಶಕ್ತಿಯನ್ನು ವ್ಯಯಿಸುವ ಸಮಯವಾಗಿದೆ. ಹೆಚ್ಚುತ್ತಿರುವ ತಾಪಮಾನ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆಯ ಸಮಯದಲ್ಲಿ ಅವರು ಉತ್ತಮ ಆಹಾರ ಪದ್ಧತಿಯ ಮೇಲೆ ಗಮನ ಹರಿಸುವುದು ಕೂಡಾ ಅಷ್ಟೇ ಅವಶ್ಯಕ. ಸರಿಯಾದ ಆಹಾರಗಳ ಸೇವನೆ ಮಕ್ಕಳನ್ನು ಶಕ್ತಿಯುತವಾಗಿರಿಸುವುದಲ್ಲದೆ, ಅವರು ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ನಿರ್ಜಲೀಕರಣ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಂತಹ ಸಾಮಾನ್ಯ ಬೇಸಿಗೆಯ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ತಾಜಾ, ಪೋಷಕಾಂಶ ಭರಿತ ಮತ್ತು ತಂಪಾಗಿಸುವ ಆಹಾರಗಳನ್ನು ಆಹಾರದಲ್ಲಿ ಸೇರಿಸುವ ಮೂಲಕ, ಮಕ್ಕಳು ಬೇಸಿಗೆಯಾದ್ಯಂತ ಆರೋಗ್ಯಕರವಾಗಿ, ಸಕ್ರಿಯವಾಗಿ ಮತ್ತು ಉಲ್ಲಾಸದಿಂದ ಇರುವುದನ್ನು ಪೋಷಕರು ಖಚಿತಪಡಿಸಿಕೊಳ್ಳಬಹುದು.

ಮಕ್ಕಳು ಸಾಕಷ್ಟು ನ...