Bengaluru, ಮಾರ್ಚ್ 25 -- ಬಿಸಿಲಿನ ಶಾಖ ದಿನದಿಂದ ದಿನಕ್ಕೆ ಗರಿಷ್ಠ ಎನ್ನುವ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮಾರ್ಚ್ ತಿಂಗಳು ಮುಗಿಯುತ್ತಾ ಬಂದರೂ, ಏಪ್ರಿಲ್ ಮತ್ತು ಮೇ ಎರಡು ತಿಂಗಳು ಇನ್ನಷ್ಟು ಸುಡುಬಿಸಿಲು ಇರಲಿದೆ. ಹೀಗಾಗಿ ಬೇಸಿಗೆಯಲ್ಲಿ ನೀವು ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಅದರಲ್ಲೂ ಬಿಸಿಲಿಗೆ ಮತ್ತು ಸೂರ್ಯನ ಶಾಖಕ್ಕೆ ನೇರ ಒಡ್ಡಿಕೊಳ್ಳುವ ಕಣ್ಣುಗಳನ್ನು ಹೆಚ್ಚಿನ ಕಾಳಜಿಯಿಂದ ಜೋಪಾನ ಮಾಡಿಕೊಳ್ಳಬೇಕು.

ಬೇಸಿಗೆಯಲ್ಲಿ ಸುಡು ಬಿಸಿಲಿಗೆ ಸೂರ್ಯನ ಬೆಳಕು, ಬಿಸಿ ಗಾಳಿ ಮತ್ತು ಧೂಳು ಮತ್ತು ಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವುದು ಅನಿವಾರ್ಯ. ಇದು ನಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಕಠಿಣ ಅತಿನೇರಳೆ ಕಿರಣಗಳು, ನಿರ್ಜಲೀಕರಣ ಮತ್ತು ದೀರ್ಘ ಸಮಯದವರೆಗೆ ಮೊಬೈಲ್, ಲ್ಯಾಪ್‌ಟಾಪ್ ನೋಡುವುದರಿಂದ ಸ್ಕ್ರೀನ್ ಟೈಮ್ ಶುಷ್ಕತೆ, ಕಣ್ಣುಗಳಿಗೆ ಕಿರಿಕಿರಿ ಮತ್ತು ಆಯಾಸಕ್ಕೆ ಕಾರಣವಾಗಬಹುದು. ಕಣ್ಣಿನ ಸೋಂಕುಗಳನ್ನು ತಡೆಗಟ್ಟಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಕಣ್ಣಿನ ದೃಷ್ಟಿಯ...