Dakshina kannada, ಮಾರ್ಚ್ 27 -- Summer Drinks:ಆಂಗ್ಲ ಭಾಷೆ ಹಾಗೂ ದಿನಬಳಕೆಯ ವ್ಯಾಪಾರಿ ಭಾಷೆಯಲ್ಲಿ ಕೋಕಂ ಎನ್ನುವ ಮುರುಗಲ ಹಣ್ಣು, ಕರಾವಳಿಯಲ್ಲಿ ಪ್ರಸಿದ್ಧವಾದ ಪುನರ್ಪುಳಿ ಹಣ್ಣಿನ ರಸಕ್ಕೆ ಬೇಸಗೆಯಲ್ಲಿ ಭಾರಿ ಬೇಡಿಕೆ. ಕೂಲ್ ನೀರೊಂದಿಗೆ ಸಕ್ಕರೆಮಿಶ್ರಿತ ಪುನರ್ಪುಳಿ ಎಸೆನ್ಸ್ ಹಾಕಿ ಕುಡಿದರೆ ದಾಹ ಖತಂ!!. ಆದರೆ ಮಂಗಳೂರು ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಪುನರ್ಪುಳಿಗೆ 120 ರೂ ಇದೆ. ಗ್ರಾಮೀಣ ಭಾಗಕ್ಕೆ ಹೋದರೆ ತೀರಾ ಕಮ್ಮಿ ಏನಿಲ್ಲ. 80ರಿಂದ 120 ರೂ ಧಾರಣೆಯ ಕೋಕಂಗೆ ಈಗ ಭಾರೀ ಬೇಡಿಕೆ. ಈಗ ಕಸಿ ಮಾಡಿದ ಹೈಬ್ರೀಡ್ ತಳಿಗಳೇ ಅಧಿಕವಾಗಿ ಕಾಣಸಿಗುತ್ತದೆ. ಸಾಧಾರಣವಾಗಿ ಗುಡ್ಡೆಗಳಲ್ಲಿ ಇದು ಸೊಂಪಾಗಿ ಬೆಳೆಯುತ್ತದೆ. ಮಾರ್ಚ್ ಕೊನೆಯ ವಾರದಿಂದ ಜುಲೈ ಮೊದಲ ವಾರದ ತನಕ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಪುನರ್ಪುಳಿ ಹಣ್ಣುಗಳು ದೊರಕುತ್ತವೆ. ಆದರೆ ಅದನ್ನೇ ಬೆಳೆಯುವವರು ಇಲ್ಲ. ಗೇರು, ಮಾವು ಜೊತೆ ಪುನರ್ಪುಳಿ ಮರಗಳೂ ಕಾಣಸಿಗುತ್ತವೆ.

ಮುರುಗಲ ಹಣ್ಣು ಅಥವಾ ಪುನರ್ಪುಳಿ ಅಥವಾ ಕೋಕಂ ಪಶ್ಚಿಮ ಘಟ್ಟಗಳಲ್ಲಿ ಹಾಗ...