Mysuru, ಮಾರ್ಚ್ 31 -- Summer camps 2025:ಕರ್ನಾಟಕವು ರಂಗಭೂಮಿ ಚಟುವಟಿಕೆಗೆ ಹೆಸರುವಾಸಿ. ಹಿರಿಯರಿಗೆ ಮಾತ್ರವಲ್ಲದೇ ಮಕ್ಕಳಲ್ಲಿರುವ ರಂಗ ಪ್ರತಿಭೆ ಹೊರ ತೆಗೆದು ಅವರ ವ್ಯಕ್ತಿತ್ವವನ್ನು ವಿಕಸನ ಮಾಡುವ ಪ್ರಯತ್ನಗಳು ಕರ್ನಾಟಕದ ರಂಗಾಯಣಗಳಿಂದಲೂ ಆಗುತ್ತಿದೆ. ಅದರಲ್ಲೂ ಬೇಸಿಗೆ ಬಂದರೆ ಒಂದು ತಿಂಗಳ ಕಾಲ ಮಕ್ಕಳು ರಂಗಾಯಣಗಳ ಅಂಗಳದಲ್ಲಿ ಆಡಿ ಕುಣಿದು ಕುಪ್ಪಳಿಸಿ ರಜೆಯನ್ನು ವಿಭಿನ್ನವಾಗಿ ಕಳೆಯುತ್ತಾರೆ. ಮೈಸೂರಿನ ಪ್ರತಿಷ್ಠಿತ ರಂಗಾಯಣದ ಚಿಣ್ಣರ ಮೇಳಕ್ಕೆ ಎರಡು ದಶಕಕ್ಕೂ ಮಿಗಿಲಾದ ಇತಿಹಾಸವಿದೆ. ಧಾರವಾಡ, ಶಿವಮೊಗ್ಗ ರಂಗಾಯಣಗಳಲ್ಲೂ ಬೇಸಿಗೆ ಶಿಬಿರದ ಚಟುವಟಿಕೆಗಳು ನಡೆಯಲಿವೆ. ಅದೇ ರೀತಿ ಕಲಬುರಗಿ, ಕಾರ್ಕಳದ ಯಕ್ಷ ರಂಗಾಯಣದಲ್ಲೂ ಚಿಣ್ಣರ ಮೇಳ ಆಕರ್ಷಕ ಎನ್ನಿಸಲಿವೆ.

ಮಕ್ಕಳು ಪ್ರಕೃತಿಯ ಕೊಡುಗೆ, ಮನಸ್ಸು ಮುಕ್ತ, ಕನಸು ಕಣಜ, ಕಲ್ಪನೆ ಅದ್ಭುತ ಇವುಗಳನ್ನು ಮುತುವರ್ಜಿಯಿಂದ ಕಾಪಿಡುವ, ರೂಪಿಸುವ ಹೊಣೆ ಪೋಷಕರದ್ದು, ಶಿಕ್ಷಕರದ್ದು, ಸಮಾಜದ್ದು. ಅದಕ್ಕಾಗಿ ಬಂಧನ ಮುಕ್ತ ಸಾಂಸ್ಕೃತಿಕ ವಾತಾವರಣದ ನಿರ್ಮಾಣ ಮತ್ತು ನಿರ್ವಹ...