Bangalore, ಮಾರ್ಚ್ 31 -- Summer camps 2025:ಈ ಬೇಸಿಗೆಯ ರಜೆಯನ್ನು ಮಕ್ಕಳು ವಿಭಿನ್ನವಾಗಿ ಕಳೆಯಬೇಕು ಎನ್ನುವ ಯೋಚನೆಯಲ್ಲಿದ್ದಾರೆ, ಅದರಲ್ಲೂ ಪೋಷಕರು ಮಕ್ಕಳು ವಿಭಿನ್ನ ಚಟುವಟಿಕೆಯ ಮೂಲಕ ಬೇಸಿಗೆ ರಜಾ ದಿನಗಳನ್ನು ಕಳೆಯಲು ಬೇಕಾದ ತಯಾರಿ ಮಾಡಿಕೊಳ್ಳುತ್ತಿರಲೂಬಹುದು. ಆದರೆ ಮಕ್ಕಳಲ್ಲಿರುವ ಆಸಕ್ತಿ ಆಧರಿಸಿ ಅವರನ್ನು ಬೇಸಿಗೆ ಶಿಬಿರಕ್ಕೆ ಸೇರಿಸಿದರೆ ಅವರ ಬದುಕು ಹಾಗೂ ಹವ್ಯಾಸಗಳ ದೃಷ್ಟಿಯಿಂದಲೂ ಸಹಕಾರಿಯಾಗಬಹುದು. ಇಂತಹದೇ ರೀತಿಯ ಬೇಸಿಗೆ ಶಿಬಿರಗಳು ಮೈಸೂರು ಹಾಗೂ ಬೆಂಗಳೂರಿನಲ್ಲಿ ನಿಗದಿಯಾಗಿವೆ. ಒಂದೂಕಾಲು ಶತಮಾನ ಇತಿಹಾಸ ಇರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯ, ಬೆಂಗಳೂರಿನ ಹಳೆಯದಾದ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಪರಿಸರ ಪೂರಕ ಬೇಸಿಗೆ ಶಿಬಿರಗಳು ನಡೆಯಲಿವೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಏಪ್ರಿಲ್ 14 ರಿಂದ 19 ಮತ್ತು ಮೇ 5 ರಿಂದ 10 ರವರೆಗೆ, 6 ದಿನಗಳ ಎರಡು ಬ್ಯಾಚ್‌ಗಳಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. 11 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆರು ದಿನಗಳ ಬೇ...