Bantwal, ಏಪ್ರಿಲ್ 13 -- Summer Camp: ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಮೈಸೂರಿನಲ್ಲಿ ಸಿಗುವ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲೆಯ 40ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ಮಕ್ಕಳು ಭಾಗವಹಿಸಿದ ಬೇಸಗೆ ಶಿಬಿರ ತನ್ನ ವೈಶಿಷ್ಟ್ಯಗಳ ಮೂಲಕ ಗಮನ ಸೆಳೆಯಿತು. ಮೊಬೈಲ್ ನಲ್ಲಿ ಮುಳುಗಿರುವ ಮಕ್ಕಳನ್ನು ದಶಕಗಳ ಹಿಂದಕ್ಕೆ ಕೊಂಡೊಯ್ದ ಶಿಬಿರವಿದು. ಇದರ ಹೆಸರು ಅಜ್ಜಿಮನೆ.

ಒಂದಾನೊಂದು ಕಾಲದಲ್ಲಿ, ಮೊಬೈಲ್‌ ಇಲ್ಲದ ಊರಿನಲ್ಲಿ ಎಂಬ ಉಪಶೀರ್ಷಿಕೆಯೊಂದಿಗೆ ರೂಪುಗೊಂಡ ಶಿಬಿರದಲ್ಲಿ ಮಹರಾಷ್ಟ್ರ, ಬೆಂಗಳೂರು, ಮಂಗಳೂರು,ಪುತ್ತೂರು ಬಿ.ಸಿ.ರೋಡು, ಕಲ್ಲಡ್ಕ, ಉಪ್ಪಿನಂಗಡಿ, ವಿಟ್ಲ ಸಹಿತ ಸಹಿತ ಜಿಲ್ಲೆಯ 40 ಕ್ಕೂ ಅಧಿಕ ವಿದ್ಯಾಸಂಸ್ಥೆಗಳ 211 ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು.

ಮೊದಲ ದಿನವೇ ಅಜ್ಜಿ ಮನೆಗೆ ಸ್ಪೆಷಲ್‌ ಎಂಟ್ರಿಕೊಟ್ಟು ಮಕ್ಕಳನ್ನು ಅಜ್ಜಿಕಾಲಕ್ಕೆ ಕರೆದೊಯ್ದವರು ಮಾಣಿಯ ಪ್ರಪುಲ್ಲಾ ರೈ ಯವರು. ಮಕ್ಕಳಿಗೆ ಹಿಂದಿನ ಕಾಲದಲ್ಲಿ ಮನೆಯೊಳಗೆ ಇದ್ದ ಪರಿಸ್ಥಿತಿ, ಆಗಿನ ಆಟ...