Mysuru, ಮಾರ್ಚ್ 12 -- ಕಾಡು ಮುಖ್ಯವಾಗಿ ಜಲ ಮೂಲದ ತಾಣ. ಆದರೆ ಬೇಸಿಗೆ ಬಂದರೆ ಕಾಡಿನಲ್ಲೇ ನೀರಿಗೆ ಸಮಸ್ಯೆ ಎದುರಾಗುತ್ತದೆ. ,ಕರ್ನಾಟಕದ ಕೆಲವು ಅರಣ್ಯ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಮಾರ್ಚ್‌ನಲ್ಲಿಯೇ ಕಂಡು ಬಂದಿದೆ.

ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಹಂಚಿ ಹೋಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಸಹಿತ ಕೆಲವು ಭಾಗಗಳಲ್ಲಿ ಕೆರೆಗಳು ಒಣಗಿ ಹೋಗಿವೆ.

ಇದರಿಂದ ಕರ್ನಾಟಕ ಅರಣ್ಯ ಇಲಾಖೆಯವರು ಟ್ಯಾಂಕರ್‌ ಬಳಸಿ ನೀರನ್ನು ಕೆರೆಗೆ ತುಂಬಿಸಿ ವನ್ಯಜೀವಿಗಳ ಬಳಕೆಗೆ ಉಪಯೋಗ ಮಾಡಿಕೊಡುತ್ತಿದ್ದಾರೆ.

ನಾಗರಹೊಳೆ ವ್ಯಾಪ್ತಿಯಲ್ಲಿ 256 ಕೆರೆಗಳಿವೆ. ಅದರಲ್ಲಿ ಕೆಲವು ಕೆರೆಗಳ ಬಳಿ ಸೋಲಾರ್‌ ಬಳಸಿ ಮೋಟಾರ್‌ ನೀರು ತಂದು ಇತರೆಡೆಗೆ ತುಂಬಿಸಲಾಗುತ್ತಿದೆ. ಕಾಡಂಚಿನ ಗ್ರಾಮಗಳ ಕೆರೆಗಳಿಗೂ ನೀರು ಕೊಡಲಾಗುತ್ತಿದೆ,

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಡಿಕೆಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕಾಡಿನಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಕಾಡಿನ ಅಂಚಿನಲ್ಲಿ ನೀರಿನ ತೊಟ್ಟಿ ಇಡು...