ಭಾರತ, ಮಾರ್ಚ್ 19 -- Sudha Murty on Teachers: ರಾಜ್ಯಸಭಾ ಸದಸ್ಯೆಯೂ ಆಗಿರುವ, ಇನ್ಫೋಸಿಸ್‌ ಸುಧಾ ಮೂರ್ತಿ ಶಿಕ್ಷಣ ಹಾಗೂ ಶಿಕ್ಷಕರ ಗುಣಮಟ್ಟ ಹೆಚ್ಚಿಸುವ ಬಗ್ಗೆ ಸಲಹೆಯೊಂದನ್ನು ನೀಡಿದ್ದಾರೆ. ಶಿಕ್ಷಕರಿಗಾಗಿ ಹೊಸ ತರಬೇತಿ ಕೋರ್ಸ್‌ಗಳನ್ನು ನಡೆಸುವುದು ಮತ್ತು ಪ್ರತಿ ಮೂರು ವರ್ಷಗಳಿಗೊಮ್ಮೆ ಶಿಕ್ಷಕರ ಪರೀಕ್ಷೆಗಳನ್ನು ನಡೆಸುವುದು ಮತ್ತು ಪ್ರಾಥಮಿಕ ಹಂತದಲ್ಲಿ ಬೋಧಿಸುವವರಿಗೆ ಇನ್ನಷ್ಟು ತರಬೇತಿಗಳನ್ನು ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಶಿಕ್ಷಣ ಸಚಿವಾಲಯದ ಕಾರ್ಯವೈಖರಿಯ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಪ್ರತಿ ವಿದ್ಯಾರ್ಥಿಯ ಬಾಳಿನಲ್ಲೂ ಶಿಕ್ಷಕರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ ಮತ್ತು ಉತ್ತಮ ಶಿಕ್ಷಕರಿಲ್ಲದಿದ್ದರೆ ಶಿಕ್ಷಣ ವ್ಯವಸ್ಥೆಯು ಸುಧಾರಿಸುವುದಿಲ್ಲ ಎಂದು ಹೇಳಿದ್ದಾರೆ.

'ಶಿಕ್ಷಕರು ಒಮ್ಮೆ ಬಿಎ ಅಥವಾ ಎಂಎ, ಅಥವಾ ಕಾಲೇಜು ಮಟ್ಟದಲ್ಲಿ ಪಿಎಚ್‌ಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಧ್ಯಾಪನ ವೃತ್ತಿಗೆ ಬರುತ್ತಾರೆ. ನಂತರ ಅವರು ನ...