Bangalore, ಮಾರ್ಚ್ 15 -- ಕನ್ನಡದ ಸೂಪರ್‌ಸ್ಟಾರ್‌ ಕಿಚ್ಚ ಸುದೀಪ್‌ ಅವರ ಅಳಿಯ ಸಂಚಿತ್‌ ಸಂಜೀವ್‌ ಕನ್ನಡ ಚಿತ್ರರಂಗಕ್ಕೆ ಆಗಮಿಸುವ ಸಂಗತಿ ಎಲ್ಲರಿಗೂ ಗೊತ್ತು. ನಿರ್ದೇಶಕ ವಿವೇಕ್‌ ಸಿನಿಮಾಕ್ಕೆ ಇವರು ನಾಯಕರಾಗುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಮುಹೂರ್ತ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕಳೆದ ವರ್ಷ ನಡೆದಿದೆ. ಕಳೆದ ವರ್ಷ ಬಿಗ್‌ಬಾಸ್‌ ಕನ್ನಡದ ಗ್ರ್ಯಾಂಡ್‌ ಫಿನಾಲೆಯಲ್ಲಿ ಸುದೀಪ್‌ ಮಗಳು ಸಾನ್ವಿ ವೇದಿಕೆಯಲ್ಲಿದ್ದರು. ಈಕೆ ಸಿನಿಮಾ ನಟಿಯಾಗೋದಿಲ್ವ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿತ್ತು. ಪಾಡ್‌ಕಾಸ್ಟ್‌ ಸಂದರ್ಶನವೊಂದರಲ್ಲಿ ತನ್ನ ನಟನಾ ಕರಿಯರ್‌ ಕುರಿತು ಸಾನ್ವಿ ಸುದೀಪ್‌ ಖಚಿತಪಡಿಸಿದ್ದಾರೆ.

ಸುದೀಪ್‌ ಫ್ಯಾಮಿಲಿಯಿಂದ ಸಂಚಿತ್‌ ಮಾತ್ರ ಚಿತ್ರರಂಗಕ್ಕೆ ಬರುತ್ತಿದ್ದಾರೆ ಎಂದು ಕೆಲವರು ಅಂದುಕೊಂಡಿರಬಹುದು. ಆದರೆ, ಸುದೀಪ್‌ ಮಗಳು ಸಾನ್ವಿ ಕೂಡ ಅವಕಾಶಕ್ಕಾಗಿ ಮತ್ತು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. ಶೀಘ್ರದಲ್ಲಿ ಈಕೆಯೂ ನಟನಾ ಜಗತ್ತಿನಲ್ಲಿ ತನ್ನ ಅದೃಷ್ಟ ಪರೀಕ್ಷಿಸಲಿದ್ದಾರೆ. ಸದ್ಯ ಸಾನ್ವಿ ...