Guwahati,Bengaluru, ಫೆಬ್ರವರಿ 22 -- Successful Woman: ಮಕ್ಕಳಾಟ ಆಡುತ್ತಿದ್ದ ವಯಸ್ಸಿನಲ್ಲೇ ಮದುವೆಯಾಗಿ, 20 ವರ್ಷ ತುಂಬುವ ಮೊದಲೇ ಮಗಳಿಗೆ ಜನ್ಮ ನೀಡಿದ ಮಹಿಳೆ ಈಕೆ. ಮಗಳ ಜನನವಾಗಿ ನಾಲ್ಕು ತಿಂಗಳಾಗಿತ್ತಷ್ಟೆ. ಪತಿ ನಿಧನರಾದರು. ಅಂದು ಈ ಪುಟ್ಟ ತಾಯಿ ಮತ್ತು ಮಗಳ ಬದುಕು ಅತ್ಯಂತ ಸಂಕಷ್ಟಕ್ಕೆ ಬಿತ್ತು. ಪತಿಯ ಮನೆಯಲ್ಲಿ ಅತ್ತೆ- ಮಾವನಿಗೆ ಯಾವುದೇ ಆದಾಯ ಇರಲಿಲ್ಲ. ತುತ್ತು ಊಟಕ್ಕೂ ಕಷ್ಟವಾದ ಸನ್ನಿವೇಶ. ಈ ಪುಟ್ಟ ತಾಯಿ 12ನೇ ತರಗತಿ ಓದಿಕೊಂಡಿದ್ದರು. ಸಂಕಷ್ಟದ ನಡುವೆಯೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಮಗಳ ಭವಿಷ್ಯ ಮುಂದಿತ್ತು. ಎದೆಗುಂದದೆ ಸ್ವ ಉದ್ಯೋಗದ ಕಡೆಗೆ ಮುಖಮಾಡಿದರು. 500 ರೂಪಾಯಿ ಹೂಡಿಕೆ ಮಾಡಿ ಶುರುಮಾಡಿದ ಸ್ವ ಉದ್ಯೋಗ ಈಗ ತಿಂಗಳಿಗೆ 3.5 ಲಕ್ಷ ರೂಪಾಯಿ ಆದಾಯ ಕೊಡುತ್ತಿದೆ. ಇದು ಅಸ್ಸಾಂ ಕನಿಕಾ ತಾಲೂಕ್ದಾರ್‌ ಅವರ ಯಶೋಗಾಥೆ.

ಅಸ್ಸಾಂನ ನಲ್‌ಬರಿ ಜಿಲ್ಲೆಯ ಬರ್ಜಾರಾಸ್ ಗ್ರಾಮದ ನಿವಾಸಿ ಕನಿಕಾ ತಾಲೂಕ್ದಾರ್‌. 2005ರಲ್ಲಿ ಅವರ ಮದುವೆಯಾಗಿತ್ತು. ಮದುವೆಯಾಗಿ ಮೂರು ವರ್ಷವಾಗುವ ಮೊದಲೇ ಮಗಳು ...