ಭಾರತ, ಮಾರ್ಚ್ 9 -- Successful Woman: ಬದುಕಿನಲ್ಲಿ ಉತ್ತಮ ಆದಾಯ ಗಳಿಸಬೇಕು, ಕೈ ತುಂಬಾ ಹಣ ಓಡಾಡಬೇಕು. ಒಟ್ಟಿನಲ್ಲಿ ಯಶಸ್ವಿ ಎನಿಸಿಕೊಳ್ಳಬೇಕು ಎಂಬ ಆಸೆ, ಕನಸು ಬಹುತೇಕರದ್ದು. ಈ ರೀತಿ ಯಶಸ್ವಿಯಾಗಬೇಕು ಎಂದರೆ ಅದು ಒಂದರೆಡು ದಿನಗಳಲ್ಲಿ ಆಗುವಂಥದ್ದಲ್ಲ. ಗುರಿಯ ಸ್ಪಷ್ಟತೆ ಇರುವಂತೆ ಯೋಜನೆಯೂ ಸ್ಪಷ್ಟವಾಗಿರಬೇಕು. ಅದು ಸರಿಯಾಗಿ ಅನುಷ್ಠಾನವಾಗಬೇಕು. ಸ್ಥಿರತೆಯನ್ನು ಕಾಪಾಡಬೇಕು. ಇದನ್ನು ಅನುಸರಿಸಿ 500 ರೂ ಆರಂಭಿಕ ಹೂಡಿಕೆ ಮಾಡಿಕೊಂಡು, ತಿಂಗಳಿಗೆ 2 ಲಕ್ಷ ರೂ ದುಡಿಮೆ ಮಾಡುತ್ತ ಯಶಸ್ವಿ ಮಹಿಳೆ ಎನಿಸಿಕೊಂಡಿರುವ ಪ್ರತಿಭಾ ಝಾ ಅವರ ಯಶೋಗಾಥೆ ಇಲ್ಲಿದೆ.

ಹೌದು, ಆಕೆ ವಿದ್ಯಾವಂತಳಲ್ಲ. ಸ್ವ ಉದ್ಯೋಗದ ಸಂಕಲ್ಪ ಮನಸ್ಸಿನಲ್ಲಿ ಬಲವಾಗಿತ್ತು. ಮದುವೆಯಾಗಿ ಹದಿನೈದು ವರ್ಷಗಳಾಗಿವೆ. ಮದುವೆ ನಂತರ ಅಡುಗೆ ಮನೆಗೆ ಸೀಮಿತವಾಗಿತ್ತು ಬದುಕು. ಸ್ವ ಉದ್ಯೋಗದ ಕನಸು ನನಸಾಗುವಂತೆ ಮಾಡುವಲ್ಲಿ ಅತ್ತೆ ಮಾವಂದಿರ ಪ್ರೋತ್ಸಾಹ ಇರಲಿಲ್ಲ. ಆದರೂ ಪ್ರಯತ್ನ ಬಿಡಲಿಲ್ಲ. ಈ ವಿಚಾರದಲ್ಲಿ ಗಂಡನ ಮನಸ್ಸು ಗೆದ್ದು ಅವರ ಸಹಾಯದಿಂದಲೇ ಸ್ವ ಉದ್ಯ...