Bangalore, ಜನವರಿ 29 -- ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಟೆಕ್ಕಿ ಸಾಗರ್‌ ಮೋಯ್‌ ಸೇನ್‌ಗುಪ್ತಾ ಅವರು ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ನೆಟ್ಟಿಗರ ಗಮನ ಸೆಳೆದಿದೆ. ಅವರು ತಮ್ಮ ಪತ್ನಿಯ ಬೇಕರಿ ಬಿಸ್ನೆಸ್‌ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನ ಜತೆಗೆ ತಮ್ಮ ಪತ್ನಿ ಅಸ್ಮಿತಾ ಮಾಡಿರುವ ಕಪ್‌ಕೇಕ್‌ನ ಫೋಟೋವನ್ನೂ ಹಂಚಿಕೊಂಡಿದ್ದಾರೆ. "ಅವಳು ಬೇಕರಿ ಬಿಸ್ನೆಸ್‌ ಮಾಡಿದಳು, ಥ್ಯಾಂಕ್‌ ಯು ಗಾಡ್‌" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅನೇಕರು ಪ್ಯಾಶನ್‌ ಅನ್ನು ಅನುಸರಿಸುವ ನಿರ್ಧಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಪ್ಯಾಶನ್‌ ಮತ್ತು ಹಣ ಇವೆರಡಲ್ಲಿ ಯಾವುದು ಮುಖ್ಯ ಎಂದು ಕೇಳಿದ್ದಾರೆ. ಅದಕ್ಕೆ ಸಾಗರ್‌ "ಹಣ ಮತ್ತು ನಂತರ ಪ್ಯಾಶನ್‌" ಎಂದು ಉತ್ತರ ನೀಡಿದ್ದಾರೆ.

ಅಸ್ಮಿತಾ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಜನಿಸಿದರು. ಕೋಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ವೆಲ್ಫೇರ್ & ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಿಂದ...