ಭಾರತ, ಫೆಬ್ರವರಿ 18 -- ಸ್ಟಾರ್ ಸುವರ್ಣ ವಾಹಿನಿಯು ಹೊಸ ಧಾರಾವಾಹಿಯೊಂದಿಗೆ ನಿಮ್ಮ ಮುಂದೆ ಬರಲಿದೆ. ಶಾರದೆ ಎಂಬ ಹೊಸ ಧಾರಾವಾಹಿಯ ಪ್ರೋವೋವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಆದರೆ, ಈ ಧಾರಾವಾಹಿ ಯಾವಾಗಿನಿಂದ ಆರಂಭವಾಗುತ್ತದೆ ಎಂಬುದು ತಿಳಿದು ಬಂದಿಲ್ಲ. ಧಾರಾವಾಹಿಯ ಪ್ರೋಮೋ ಅಂದವಾಗಿ ಮೂಡಿ ಬಂದಿದ್ದು, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಚುಕ್ಕಿತಾರೆ' ಧಾರಾವಾಹಿಯ ಪುಟಾಣಿ ಇಬ್ಬನಿ ಈ ಧಾರಾವಾಹಿಯಲ್ಲೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಪ್ರೋಮೋದಲ್ಲಿ ಇಬ್ಬನಿಯನ್ನು ಕಂಡು ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದವರೂ ಇದ್ದಾರೆ.

ಈ ಧಾರಾವಾಹಿ ಡಬ್ಬಿಂಗ್ ಮಾಡಿದ ಧಾರಾವಾಹಿ ಎಂದು ಸಾಕಷ್ಟು ಜನ ಹೇಳುತ್ತಿದ್ದು, ನೋಡಿದ ಧಾರಾವಾಹಿಯನ್ನೇ ಎಷ್ಟು ಸಲ ನೋಡಲು ಸಾಧ್ಯ ಎನ್ನುತ್ತಿದ್ದಾರೆ. ಚೆಲ್ಲಮ್ಮ ತಮಿಳು ಧಾರಾವಾಹಿಯ ರೀಮೆಕ್ ಮಾಡಿದ ಧಾರಾವಾಹಿ 'ಶಾರದೆ' ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ಕಾರ್ತಿಕದೀಪಮ್ ರಿಮೇಕ್ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಕನ್ನಡದಲ್ಲಿ ಹೊ...