Bangalore, ಏಪ್ರಿಲ್ 10 -- SSLC Results 2025:ಕರ್ನಾಟಕದಲ್ಲಿ ಈಗಾಗಲೇ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಎಸ್‌ಎಸ್‌ಎಲ್‌ಸಿ 2025ರ ಪರೀಕ್ಷೆಗಳು ಮುಗಿದು ಆರು ದಿನಗಳೇ ಕಳೆದಿವೆ. ಈ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಯಾವಾಗ ಹೊರ ಬೀಳಬಹುದು ಎನ್ನುವ ನಿರೀಕ್ಷೆಗಳು ಇವೆ. ಈಗಾಗಲೇ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿ ಯೋಜಿಸಿದಂತೆ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್‌ 11ರ ಶುಕ್ರವಾರದಿಂದಲೇ ಆರಂಭವಾಗಬೇಕಿತ್ತು. ಆದರೆ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಮೌಲ್ಯಮಾಪನವನ್ನು ಮುಂದಕ್ಕೆ ಹಾಕಿದೆ. ಈಗಿನ ಯೋಜನೆಯಂತೆ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನವು ಏಪ್ರಿಲ್‌ 15ರಿಂದ ಆರಂಭವಾಗಲಿದೆ. ಒಂದು ವಾರದಲ್ಲಿಯೇ ಮೌಲ್ಯಮಾಪನ ಮುಕ್ತಾಯಗೊಂಡು ಏಪ್ರಿಲ್‌ ಕೊನೆಯ ವಾರದಲ್ಲಿಯೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.

Published by HT Digital Content Services with permission from HT Kannada....