Bangalore, ಮಾರ್ಚ್ 30 -- SSLC Results 2025: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬೇಗನೇ ಬರುವ ನಿರೀಕ್ಷೆಯಿದೆ. ಏಕೆಂದರೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಗನೇ ಶುರುವಾಗಲಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಲಿಯು 2025 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವನ್ನು ಏಪ್ರಿಲ್ 11 ರಿಂದ ಆರಂಭಿಸಲಿದ್ದು, ಇದಕ್ಕಾಗಿ ಶಿಕ್ಷಕರಿಗೆ ಸೂಚನೆಗಳನ್ನು ನೀಡಲಾಗಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯಕ್ಕೂ ಅಣಿಯಾಗಲಿದ್ದಾರೆ. ಬಹುತೇಕ ಏಪ್ರಿಲ್‌ ಕೊನೆಯ ವಾರದೊಳಗೆ ಮೌಲ್ಯಮಾಪನ ಮುಗಿಯಲಿದ್ದು, ಈ ಬಾರಿಯ ಪರೀಕ್ಷೆಯ ಫಲಿತಾಂಶ ಮೇ ಮೊದಲ ವಾರದಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಗಳಿವೆ.

Published by HT Digital Content Services with permission from HT Kannada....