ಭಾರತ, ಫೆಬ್ರವರಿ 18 -- ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ತಯಾರಿಯಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ಪರೀಕ್ಷೆ ಆರಂಭವಾಗಲಿದೆ. ಮಕ್ಕಳು ಅಂತಿಮ ಹಂತದ ಓದು ಹಾಗೂ ಮನನದಲ್ಲಿ ತೊಡಗಿದ್ದಾರೆ. ಗಮನವಿಟ್ಟು ಓದಿದರೆ, ಅದು ನೆನಪಿನಲ್ಲಿ ಉಳಿಯುತ್ತದೆ. ಓದುವ ಸಮಯದಲ್ಲಿ ಮನಸಿಟ್ಟು, ಗಮನವಿಟ್ಟು ಅಧ್ಯಯನ ಮಾಡುವುದು ಪರಿಣಾಮಕಾರಿ ಓದಿನ ಮೊದಲ ಗುಟ್ಟು. ಹತ್ತನೇ ತರಗತಿಯ ಮಕ್ಕಳು ಸಾಮಾನ್ಯವಾಗಿ ವಿಜ್ಞಾನ ವಿಷಯವನ್ನು ಕಷ್ಟ ಎಂದು ಹೇಳುವುದಿದೆ. ಆದರೆ, ವಿಷಯದಲ್ಲಿ ಆಸಕ್ತಿ ಬೆಳೆಸಿದರೆ ವಿಜ್ಞಾನ ಕಬ್ಬಿಣದ ಕಡಲೆ ಅಲ್ಲ.

ವಿಜ್ಞಾನ ವಿಷಯಗಳನ್ನು ಪರಿಣಾಮಕಾರಿಯಾಗಿ ಓದಲು ಮತ್ತು ಅರ್ಥಮಾಡಿಕೊಳ್ಳಲು, ನಿಮ್ಮದೇ ಆದ ಕೆಲವೊಂದು ತಂತ್ರಗಳನ್ನು ಅನುಸರಿಸಬಹುದು. ಮೊದಲಿಗೆ ಪ್ರಶ್ನೆ ಪತ್ರಿಕೆಯ ಮಾದರಿ ಅಥವಾ ಬ್ಲ್ಯೂಪ್ರಿಂಟ್ ಇಟ್ಟುಕೊಂಡು ಅದಕ್ಕೆ ಸೂಕ್ತ ಸಿದ್ಧತೆ ನಡೆಸಿ. ವಿಜ್ಞಾನವನ್ನು ಸುಲಭವಾಗಿ ಅರ್ಥಮಾಡಿಕೊಂಡು ಓದಲು ನಿಮಗೆ ಅನುಕೂಲವಾಗುವಂಥ ಸಲಹೆಗಳು ಇಲ್ಲಿವೆ.

1. ಅವಲೋಕನದೊಂದಿಗೆ ಓದಲು ಆರಂ...