ಭಾರತ, ಫೆಬ್ರವರಿ 12 -- ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಮಕ್ಕಳ ಪೋಷಕರ ಗಮನವೀಗ ಸಂಪೂರ್ಣವಾಗಿ ಪರೀಕ್ಷೆಗಳ ಮೇಲಿದೆ. ಕೆಲವೇ ದಿನಗಳಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿವೆ. ಮಾರ್ಚ್ 1ರಿಂದ ಪಿಯುಸಿ ಪರೀಕ್ಷೆಗಳು ಆರಂಭವಾದರೆ, ಮಾರ್ಚ್‌ 21ರಿಂದ 10ನೇ ತರಗತಿಯ ಅಂತಿಮ ಪರೀಕ್ಷೆಗಳು ಶುರುವಾಗಲಿವೆ. ಸದ್ಯ ಮಕ್ಕಳ ಪರೀಕ್ಷೆಯ ಸಿದ್ಧತೆಗಾಗಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ಈ ಪ್ರಿಪರೇಟರಿ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಅಭ್ಯಾಸ ಪರೀಕ್ಷೆಯಂತಾಗಲಿದೆ. ಇದೇ ಮಾದರಿಯಲ್ಲಿ ಅಂತಿಮ ಪರೀಕ್ಷೆಗಳು ನಡೆಯಲಿದ್ದು, ಪ್ರಶ್ನೆ ಪತ್ರಿಕೆಯ ನೀಲನಕ್ಷೆ, ಸಮಯ ಹೊಂದಾಣಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಈ ಪರೀಕ್ಷೆಗಳು ನೆರವಾಗಲಿವೆ.

ಪರೀಕ್ಷೆಗೆ ಸಿದ್ಧತೆ ನಡೆಸುವುದೆಂದರೆ, ದಿನವಿಡೀ ಓದುತ್ತಾ ಕುಳಿತುಕೊಳ್ಳುವುದಲ್ಲ. ಓದಿಗೊಂದು ವೇಳಾಪಟ್ಟಿ ರಚಿಸಿ, ಅದರಂತೆ ಮನಸಿಟ್ಟು ಅಭ್ಯಾಸ ನಡೆಸುವುದು ಜಾಣ ವಿದ್ಯಾರ್ಥಿಯ ಗುಣ. ಓದುವ ಸಮಯದಲ್ಲಿ ಗುಣಮಟ್ಟದ ...