ಭಾರತ, ಫೆಬ್ರವರಿ 4 -- SSLC Grace Marks: ಕರ್ನಾಟಕದ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶೇಕಡ 10 ಗ್ರೇಸ್ ಮಾರ್ಕ್ ಇರಲ್ಲ. ಅದೇ ರೀತಿ ಇದುವರೆಗೂ ಜಾರಿಯಲ್ಲಿದ್ದ ಶೇ 10 ಗ್ರೇಸ್ ಮಾರ್ಕ್‌ ಕೊಡಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ. ವೆಬ್‌ಕ್ಯಾಸ್ಟಿಂಗ್ ಜಾರಿಯಿಂದ ತೀವ್ರವಾಗಿ ಫಲಿತಾಂಶ ಕುಸಿದಿದ್ದ ಕಾರಣ ಕಳೆದ ಬಾರಿ ಅದುವರೆಗೆ ಇದ್ದ ಶೇ 10 ಗ್ರೇಸ್ ಅಂಕದ ಜೊತೆ ಹೆಚ್ಚುವರಿಯಾಗಿ ಶೇ 10 ಅಂಕ ನೀಡಲಾಗಿತ್ತು. ಕಳೆದ ಬಾರಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೇಕಡ 20 ಗ್ರೇಸ್ ಅಂಕ ಸಿಕ್ಕಿತ್ತು ಎಂಬುದನ್ನು ಸಚಿವರು ನೆನಪಿಸಿದರು. ಅವರು, ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ ಇಆರ್‌ಟಿ) ಕಚೇರಿಯಲ್ಲಿ ಸೋಮವಾರ (ಫೆ 3) ವಿವಿಧ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮದ ಬಳಿಕ ಈ ವಿಚಾರ ತಿಳಿಸಿದರು.

ಪರೀಕ್ಷಾ ಅಕ್ರಮ ತಡೆ...