Dakshina kannada, ಮಾರ್ಚ್ 26 -- SSLC Exam Karnataka 2025:ಮಂಗಳೂರು: ''ಮೊನ್ನೆ ಕನ್ನಡ ಪರೀಕ್ಷೆಯಲ್ಲಿ ಒಂದು ಪ್ರಶ್ನೆ ಕಷ್ಟವಾಗಿತ್ತು. ಇವತ್ತು ಇಂಗ್ಲೀಷ್ ಪರೀಕ್ಷೆಯಲ್ಲಿ ಅಷ್ಟೇನೂ ಕಷ್ಟವಾಗಿಲ್ಲ. ಸುಲಭವಿತ್ತು. ಉತ್ತಮ ಅಂಕಗಳನ್ನು ಗಳಿಸಬಹುದು. ಏನೂ ತೊಂದರೆ ಇಲ್ಲ, ನನಗೆ ಇಂಗ್ಲೀಷ್ ಮಾತನಾಡಲು ಕಷ್ಟವಾಗುತ್ತದೆ, ಆದರೆ ಪರೀಕ್ಷೆ ಕಷ್ಟವಾಗಲಿಲ್ಲ". ಹೀಗೆಂದು ಮುಂದಿನ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ದಕ್ಷಿಣ ಕನ್ನಡದ ಪುತ್ತೂರಿನ ಸರಕಾರಿ ಹೈಸ್ಕೂಲಿನ ವಿದ್ಯಾರ್ಥಿ ಪ್ರಜ್ವಲ್ ಕಾನ್ಫಿಡೆಂಟ್ ಆಗಿ ಇಂಗ್ಲೀಷ್ ಪರೀಕ್ಷೆ ಕುರಿತು ಹೇಳಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಬಹುತೇಕರಿಗೆ ಇಂಗ್ಲೀಷ್ ಪ್ರಶ್ನೆಪತ್ರಿಕೆ ಉತ್ತರಿಸಲು ಸುಲಭವಾಗಿತ್ತು ಎಂದು ಹಲವು ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಅಭಿಪ್ರಾಯ ವ್ಯಕ್ತವಾಯಿತು. ಮಂಗಳೂರಿನ ಸುಷ್ಮಾಗೆ ಬರೆಯಲು ತುಂಬಾ ಇತ್ತು ಎಂಬುದನ್ನು ಹೊರತುಪಡಿಸಿದರೆ, ಪರವಾಗಿಲ್ಲ ಎಂಬ ಸಮಾಧಾನವಿದ್ದರೆ, ಬೆಳ್ತಂಗಡಿಯ ಕಾರ್ತಿಕ್ ಪರೀ...