Bangalore, ಮಾರ್ಚ್ 26 -- SSLC Exam Karnataka 2025:ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಈಗಾಗಲೇ ಹಲವು ವಿಷಯಗಳ ಪರೀಖ್ಷೆ ಮುಗಿದಿದೆ. ಇಂದು ಇಂಗ್ಲೀಷ್‌ ಪತ್ರಿಕೆಯ ಪರೀಕ್ಷೆ ನಡೆದಿದೆ. ಪತ್ರಿಕೆ ಸುಲಭವಾಗಿತ್ತು ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಭಿಪ್ರಾಯಪಡುತ್ತಾರೆ. ಕೇವಲ ನಗರಪ್ರದೇಶ ಮಾತ್ರವಲ್ಲ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಖುಷಿಯಿಂದ ಇಂಗ್ಲೀಷ್‌ ಪರೀಕ್ಷೆ ಬರೆದಿದ್ದಾರೆ. ಗ್ರಾಮೀಣ ಪ್ರದೇಶದ ಇಂಗೀಷ್‌ ಭೋದಿಸುವ ಶಿಕ್ಷಕರೂ ಪತ್ರಿಕೆ ಸುಲಭವಾಗಿತ್ತು. ಕಬ್ಬಿಣದ ಕಡಲೆ ಅನ್ನಿಸಿಕೊಳ್ಳಲಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.‌ ಇನ್ನು ನಗರ ಪ್ರದೇಶದ ವಿದ್ಯಾರ್ಥಿಗಳು ಸುಲಲಿತವಾಗಿ ಪರೀಕ್ಷೆ ಬರೆದಿದ್ದು ಮುಂದಿನ ಪತ್ರಿಕೆಗೆ ತಯಾರಿ ಆರಂಭಿಸಿದ್ದಾರೆ. ಕಳದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಂಗ್ಲೀಷ್‌ ಪತ್ರಿಕೆ ಸುಲಭವಾಗಿತ್ತು. ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಕಳೆದ ವರ್ಷ ಕೆಲವೊಂದು ತಿರುವು ಮುರುವು ಪ್ರಶ್ನೆಗಳಿದ್ದವು. ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಲು ಈ ಪ್ರಶ್ನೆಗಳು ಕಾರ...