Bangalore, ಮಾರ್ಚ್ 26 -- SSLC Exam Karnataka 2025: ಯಾವುದೇ ಪರೀಕ್ಷೆ ಇರಲಿ ವಿದ್ಯಾರ್ಥಿಗಳಿಗೆ ಕಠಿಣ ಎನ್ನಿಸುವುದು ಗಣಿತ ಬಿಟ್ಟರೆ ಇಂಗ್ಲೀಷ್.‌ ಏಕೆಂದರೆ ಇಂಗ್ಲೀಷ್‌ ಕಲಿಕೆ ಸುಲಭವಾದರೂ ಪರೀಕ್ಷೆ ದೃಷ್ಟಿಯಿಂದ ಅದು ಕೊಂಚ ಕಠಿಣವೇ. ಗ್ರಾಮೀಣ ಪ್ರದೇಶ ಮಾತ್ರವಲ್ಲದೇ ನಗರ ಭಾಗದ ಮಕ್ಕಳೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂಗ್ಲೀಷ್‌ ವಿಷಯದಲ್ಲಿಯೇ ಹಿಂದೆ ಬೀಳುತ್ತಾರೆ. ಈ ಬಾರಿಯು ಬುಧವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭಾಷಾ ಪತ್ರಿಕೆಯ ಇಂಗ್ಲೀಷ್‌ ವಿಷಯದ ಪರೀಕ್ಷೆಗಳು ನಡೆದಿವು. ಪ್ರಶ್ನೆ ಪತ್ರಿಕೆಯಲ್ಲಿ ಒಂದು ಎರಡು ಅಂಕದ ಪ್ರಶ್ನೆ ಮಾತ್ರ ಗೊಂದಲಕಾರಿಯಾಗಿದ್ದನ್ನು ಬಿಟ್ಟರೆ ಪ್ರಶ್ನೆ ಪತ್ರಿಕೆ ಸರಳವಾಗಿಯೇ ಇತ್ತು. ಎಲ್ಲ ಪ್ರಶ್ನೆಗಳು ನೇರ ಹಾಗೂ ಅರ್ಥವಾಗುವ ರೀತಿಯಲ್ಲಿಯೇ ನೀಡಲಾಗಿತ್ತು. ಬಹುಪಾಲು ಮಕ್ಕಳು ಖುಷಿಯಿಂದಲೇ ಪರೀಕ್ಷೆಯನ್ನು ಸಹಜ ಹಾಗೂ ಸುಸೂತ್ರವಾಗಿಯೇ ಎದುರಿಸಿದ್ದಾರೆ.

ನೂರು ಅಂಕದ ಪ್ರಶ್ನೆ ಪತ್ರಿಕೆಯಲ್ಲಿ 80 ಅಂಕ ಪ್ರಶ್ನೋತ್ತರ, ಉಳಿದ 20 ಇಂಟರ್‌ನಲ್ಸ್‌ ರೂಪದಲ್ಲಿ ಇರುತ್ತದೆ. ಈ ಬಾರಿಯೂ ಇ...