Bangalore, ಮಾರ್ಚ್ 28 -- SSLC Exam 2025: 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಈಗಾಗಲೇ ಮೂರು ಪತ್ರಿಕೆ ಮುಗಿದಿವೆ. ಪ್ರಥಮ ಭಾಷೆ, ಗಣಿತ ಹಾಗೂ ದ್ವಿತೀಯ ಭಾಷೆ ಇಂಗ್ಲೀಷ್‌ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಪೂರ್ಣಗೊಳಿಸಿದ್ದಾರೆ. ಇನ್ನೂ ಮೂರು ವಿಷಯಗಳು ಬಾಕಿ ಇವೆ. ಇದರಲ್ಲಿ ಮುಖ್ಯ ವಿಷಯವಾಗಿರುವ ಸಮಾಜವಿಜ್ಞಾನ ಪರೀಕ್ಷೆ ಶನಿವಾರ ನಡೆಯಲಿದೆ. ಸಮಾಜ ವಿಜ್ಞಾನವು ಹಲವು ವಿಷಯಗಳ ಸಂಗಮ. ಇದರಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಭೂಗೋಳ ಶಾಸ್ತ್ರ ಸಹಿತ ವಿವಿಧ ವಿಷಯಗಳಿವೆ. ಈ ವಿಷಯಗಳನ್ನು ಒಳಗೊಂಡ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ ಪರೀಕ್ಷೆಯಲ್ಲಿ ನೀಡಲಾಗುತ್ತದೆ. ಒಂದೊಂದು ವಿಷಯಕ್ಕೂ ಇಂತಿಷ್ಟು ಪಠ್ಯಗಳಿದ್ದು ಅಂಕಗಳನ್ನೂ ನಿಗದಿಪಡಿಸಲಾಗಿದೆ. ಈಗಾಗಲೇ ತರಗತಿಯಲ್ಲಿ ಪಠ್ಯವನ್ನು ಮುಗಿಸಿ ವಿದ್ಯಾರ್ಥಿಗಳು ಅಂತಿಮ ಸಿದ್ದತೆ ಕೂಡ ಮಾಡಿಕೊಂಡಿದ್ದಾರೆ.

ಸಮಾಜ ವಿಜ್ಞಾನವು ಗಣಿತ ಹಾಗೂ ಇಂಗ್ಲೀಷ್‌ನಷ್ಟು ಕಠಿಣ ವಿಷಯವೇನಲ್ಲ. ಆದರೆ ಸಮಾಜ ವಿಜ್ಞಾನ ಎಂದರೆ ನಿಖರತೆ ಎನ್ನುವ ಮಾತಿದೆ. ಅಂದರೆ...