ಭಾರತ, ಮಾರ್ಚ್ 18 -- SSLC Exam 2025: ಈಗಾಗಲೇ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ಪಿಯುಸಿ ಪರೀಕ್ಷೆ ಮುಗಿದ ಒಂದು ದಿನಕ್ಕೆ ಅಂದರೆ ಮಾರ್ಚ್ 21ರ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಕೂಡ ನಡೆಯಲಿವೆ. ಈ ವರ್ಷ ಪರೀಕ್ಷೆಯಲ್ಲಿ ಅಕ್ರಮ ಹಾಗೂ ನಕಲು ಮಾಡುವುದನ್ನು ತಡೆಯಲು ವೆಬ್‌ಸ್ಟ್ರೀಮಿಂಗ್ ವ್ಯವಸ್ಥೆ ಮಾಡಿದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ). ಈ ಸಂಬಂಧ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷದಂತೆ ಶಾಲಾ ಶಿಕ್ಷಣ ಇಲಾಖೆಯು ಪರೀಕ್ಷೆಯಲ್ಲಿ ಹಿಂದೆ ವ್ಯಾಪಕವಾಗಿ ನಡೆಯುತ್ತಿದ್ದ ದುಷ್ಕೃತ್ಯಗಳನ್ನು ತಡೆಯಲು ಪರೀಕ್ಷೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ನಿರ್ಧರಿಸಿದೆ.

ಕಳೆದ ವರ್ಷ, ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷೆಗಳಲ್ಲಿ ಸಮಗ್ರತೆಯನ್ನು ತರುವ ಪ್ರಯತ್ನವು ಮೆಚ್ಚುಗೆಯನ್ನು ಪಡೆಯಿತು. ಆದರೆ ಅದು ಉತ್ತೀರ್ಣತೆಯ ಶೇಕಡಾವಾರು ಪ್ರಮಾಣದಲ್ಲಿ ಇಳಿಕೆಗೆ ಕಾರಣವಾಯಿತು. ಈ ವರ್ಷವೂ ಇಲಾಖೆ ಈ ಪದ್ಧತಿಯನ್ನು ಮುಂದುವರಿಸಲು ನಿರ್ಧರಿಸಿದೆ.

ಪ್ರತಿಯೊಂದು ಪರೀಕ್ಷಾ ಕೇ...