Bengaluru, ಮಾರ್ಚ್ 24 -- ಮಂಗಳೂರು: ಪರೀಕ್ಷೆ ಎಂದಾಕ್ಷಣ ಕೆಲವು ಮಕ್ಕಳಿಗೆ ಏನೋ ಒಂದು ರೀತಿಯ ಆತಂಕ ಇರುತ್ತದೆ. ಅದರಲ್ಲೂ ಗಣಿತ ವಿಷಯ ಎಂದರೆ ಭಯ ಶುರುವಾಗುತ್ತದೆ. ಇಂದು (ಮಾರ್ಚ್ 24, ಸೋಮವಾರ) ನಡೆದ ಎಸ್ಎಸ್ಎಲ್‌ಸಿ ಪರೀಕ್ಷೆಯ ಗಣಿತ ವಿಷಯ ಸುಲಭವಾಗಿತ್ತು ಎಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ನಾಲ್ಕು ಅಂಕಗಳ ಲೆಕ್ಕಗಳು ಕೆಲವರಿಗೆ ಕಷ್ಟವಾದದ್ದನ್ನು ಹೊರತುಪಡಿಸಿದರೆ, ಕರಾವಳಿಯಲ್ಲಿ ಪರೀಕ್ಷೆಗೆ ಕುಳಿತ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಗಣಿತ ಪರೀಕ್ಷೆ ಕಬ್ಬಿಣದ ಕಡಲೆ ಆಗಲಿಲ್ಲ. ಲೆಕ್ಕ ಸುಲಭವಿತ್ತು, ಬಹುತೇಕ ಮಕ್ಕಳು ಉತ್ತಮ ಅಂಕ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸರಾಸರಿಗಿಂತ ಕಡಿಮೆ ಇರುವ ಹಾಗೂ ಸಾಧಾರಣ ಕಲಿಕೆಯ ಮಕ್ಕಳಿಗೆ ಪ್ರಮೇಯ ಮತ್ತು ಸಮಾಂತರ ಶ್ರೇಣಿ ಕಷ್ಟವಾಗಿರಬಹುದು. ಒಟ್ಟಾರೆಯಾಗಿ ಪ್ರಶ್ನೆಪತ್ರಿಕೆ ಸುಲಭವಿತ್ತು ಎಂದು ಉಡುಪಿಯ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮಂಗಳೂರಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಅಭಿಲಾಷ್, ನಾನು ನೂರಕ...