ಭಾರತ, ಮಾರ್ಚ್ 18 -- ಶ್ರೀಕಾಂತ್ ಬೊಲ್ಲಾ 1991ರಲ್ಲಿ ಆಂಧ್ರಪ್ರದೇಶದ ಮಚಲಿಪಟ್ಟಣದಲ್ಲಿ ಜನಿಸಿದರು. ಶ್ರೀಕಾಂತ್ ಹುಟ್ಟಿನಿಂದಲೇ ಕುರುಡರಾಗಿದ್ದರು. ಅವರ ಕುಟುಂಬದ ಪ್ರಮುಖ ಜೀವನೋಪಾಯ ಕೃಷಿಯಾಗಿತ್ತು. ಅವರು ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರು.

ಶ್ರೀಕಾಂತ್ ಹೈದರಾಬಾದ್‌ನ ದೇವ್ನರ್ ಅಂಧ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದರು. ಅವರು 10ನೇ ತರಗತಿಯಲ್ಲಿ ಶೇ 90 ಅಂಕಗಳನ್ನು ಗಳಿಸಿದ್ದರು

2007ರಲ್ಲಿ ಅವರು ರಾಯಲ್ ಜೂನಿಯರ್ ಕಾಲೇಜಿನಿಂದ ವಿಜ್ಞಾನ ವಿಭಾಗದಿಂದ 12ನೇ ತರಗತಿ ಉತ್ತೀರ್ಣರಾಗುತ್ತಾರೆ. 12ನೇ ತರಗತಿಯಲ್ಲಿ ಶೇ 98 ಅಂಕ ಗಳಿಸಿದ್ದಾರೆ

ಭಾರತದಲ್ಲಿ ಅಧ್ಯಯನ ಮುಗಿಸಿದ ನಂತರ, ಶ್ರೀಕಾಂತ್ ಬೊಲ್ಲಾ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋದರು. ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಮ್ಯಾನೇಜ್‌ಮೆಂಟ್‌ ಸೈನ್ಸ್‌ನ ಮೊದಲ ಅಂಧ ವಿದ್ಯಾರ್ಥಿಯಾದರು. ಅಲ್ಲಿಂದ ಅವರು 2014ರಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡ...