ಭಾರತ, ಏಪ್ರಿಲ್ 4 -- Sri Rama Navami 2025: ನಮ್ಮ ದೇಶದ ಕೆಲವು ಪ್ರಾಂತ್ಯಗಳಲ್ಲಿ ಶ್ರೀರಾಮರ ಭವ್ಯ ದೇಗುಲಗಳಿವೆ. ಆದರೆ ಕೆಲವೇ ದೇಗುಲಗಳಲ್ಲಿ ಶ್ರೀರಾಮನ ಭಂಟ ಶ್ರೀ ಆಂಜನೇಯ ಸ್ವಾಮಿಗೂ ಮೊದಲ ಪ್ರಾಶಸ್ತ್ಯ ನೀಡಿದ್ದಾರೆ. ರಾಮನ ಭಂಟ ಆಂಜನೇಯನಿಗೆ ಮೂರ್ತಿಸ್ವರೂಪವನ್ನು ನೀಡಿದ್ದಾರೆ. ಇಲ್ಲಿನ ದೇವಾಲಯದ ಬಳಿಯೇ ಸೀತಾ ರಾಮರ ವಿಗ್ರಹವಿದೆ. ರಾಮನ ಅವತಾರಕ್ಕೆ ವಿಶೇಷವಾದ ಪ್ರಾಮುಖ್ಯತೆ ನೀಡಿ, ಪೂರ್ಣ ದೈವತ್ವದ ಆರಾಧನೆಯನ್ನು ಮಾಡುತ್ತಾರೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಹಣಕಾಸಿನ ಕೊರತೆಯು ದೂರವಾಗುತ್ತದೆ. ಕುಟುಂಬದಲ್ಲಿನ ಮನಸ್ತಾಪವು ದೂರವಾಗುತ್ತದೆ. ಶ್ರೀ ರಾಮ ಯಂತ್ರವನ್ನು ಪೂಜಿಸಿದಾಗ ದೊರೆಯುವ ಫಲಗಳು ಇಲ್ಲಿ ದೊರೆಯುತ್ತದೆ. ಯಂತ್ರ ಮಂತ್ರಗಳಿಂದ ಉಂಟಾಗಿರುವ ದೋಷಗಳಿಂದ ದೂರವಾಗುತ್ತವೆ.

ಇಲ್ಲಿ ಬಲಮುರಿಗಣಪತಿ ಮತ್ತು ಶಕ್ತಿಶಾಲಿಯಾದ ಶಿವನ ಪಚ್ಚೆಲಿಂಗಗಳಿವೆ. ಉತ್ತಮ ವಿದ್ಯಾಭ್ಯಾಸಕ್ಕಾಗಿ ಇಲ್ಲಿ ಶ್ರೀ ಗಣಪತಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಉತ್ತಮ ಆರೋಗ್ಯ ಮತ...