ಭಾರತ, ಏಪ್ರಿಲ್ 5 -- ಶ್ರೀ ರಾಮನವಮಿ ಬರುತ್ತಿದೆ. ಈ ಹಬ್ಬವನ್ನು ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ಎಲ್ಲಾ ರಾಮಮಂದಿರಗಳಲ್ಲಿ ಸೀತಾರಾಮರ ಕಲ್ಯಾಣ ಮಹೋತ್ಸವ ನಡೆಯುತ್ತದೆ. ಮನೆಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿ ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ರಾಮನಿಗೆ ಸಿಹಿ ತಿನಿಸುಗಳು ತುಂಬಾ ಇಷ್ಟ ಎಂಬುದು ಹಿಂದೂಗಳ ನಂಬಿಕೆಯಾಗಿದೆ. ದೇವರಿಗೆ ಸಮರ್ಪಿಸುವ ಪ್ರಸಾದಗಳಲ್ಲಿ ಹಲ್ವಾಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ನೀವು ಕೂಡ ಈ ವರ್ಷ ರಾಮನಿಗಾಗಿ ವಿಶೇಷ ಸಿಹಿ ತಿನಿಸನ್ನು ತಯಾರಿಸಿ ನೈವೇದ್ಯ ಮಾಡಲು ಬಯಸುತ್ತೀರಾದರೆ ಇಲ್ಲಿ ಪಾಕವಿಧಾನ ನೀಡಲಾಗಿದೆ. ರವೆ ಮತ್ತು ಖೋವಾದಿಂದ ತಯಾರಿಸುವ ಈ ಹಲ್ವಾ ತುಂಬಾ ಬೇಗನೆ ತಯಾರಾಗುತ್ತದೆ ಜೊತೆಗೆ ರುಚಿಕರವಾಗಿಯೂ ಇರುತ್ತದೆ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ರವೆ- ಒಂದು ಕಪ್, ಹಾಲು- ಮೂರು ಕಪ್, ತುಪ್ಪ- ಒಂದು ಕಪ್, ಗೋಡಂಬಿ- ಎರಡು ಚಮಚ, ಬಾದಾಮಿ- ಎರಡು ಚಮಚ, ದ್ರಾಕ್ಷಿ- ಎರಡು ಚಮಚ, ಸಕ್ಕರೆ- 3/4 ಕಪ್, ಹ...