ಭಾರತ, ಮಾರ್ಚ್ 18 -- ನಟಿ ಶ್ರೀಲೀಲಾ ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಕೆಲ ವರ್ಷಗಳ ಹಿಂದೆಯೇ ಅವರು ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. ವರದಿಗಳ ಪ್ರಕಾರ ಶ್ರೀಲಿಲಾ ಅನಾಥಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ನೇರವಾಗಿ ಭೇಟಿಯಾಗಿದ್ದರು. ಆ ಮಕ್ಕಳನ್ನು ನೋಡಿ ಅವರ ಜೀವನವನ್ನು ಸುಂದರಗೊಳಿಸಬೇಕು ಎಂದು ನಿರ್ಧಾರ ಮಾಡಿದ ಶ್ರೀಲೀಲಾ ಆ ಮಕ್ಕಳನ್ನು ದತ್ತು ಪಡೆದಿದ್ದಾರೆ. 'ಬೈ ಟು ಲವ್' ಎಂಬ ಸಿನಿಮಾ ಬಿಡುಗಡೆಗೆ ಕೆಲವು ದಿನಗಳಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಕೇವಲ 23 ವರ್ಷ ವಯಸ್ಸಿನ ಶ್ರೀಲೀಲಾ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಸಿನಿಪ್ರಿಯರ ಮನ ಗೆದ್ದಿದ್ದಾರೆ. ಸಾಂಪ್ರದಾಯಿಕ ಕುಟುಂಬದಿಂದ ಬಂದ ಶ್ರೀಲೀಲಾ ವಿದ್ಯಾವಂತೆಯೂ ಹೌದು. ವೈದ್ಯಕೀಯ ಅಧ್ಯಯನವನ್ನು ಪೂರ್ಣಗೊಳಿ ನಂತರ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. 2021 ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ಧಾರೆ. ನಟಿ ಶ್ರೀಲೀ...