ಭಾರತ, ಏಪ್ರಿಲ್ 29 -- ಸಿರಿಧಾನ್ಯಗಳಲ್ಲಿ ರಾಗಿಗೆ ವಿಶೇಷ ಸ್ಥಾನವಿದೆ. ರಾಗಿಯು ವಿಶೇಷವಾದ ಸೂಪರ್‌ಫುಡ್‌ ಆಗಿದ್ದು, ಇದು ಹಲವು ರೀತಿಯಲ್ಲಿ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಬೇಸಿಗೆಯ ತಾಪ ನೀಗಲು ರಾಗಿ ಸೇವನೆ ಬೆಸ್ಟ್‌. ಮಕ್ಕಳ ಆರೋಗ್ಯಕ್ಕೂ ರಾಗಿ ಉತ್ತಮ ಎಂಬುದು ಸಾಬೀತಾಗಿದೆ. ಆರೋಗ್ಯಕ್ಕೆ ಅತೀ ಅಗತ್ಯವಾಗಿರುವ ಹಲವು ಪ್ರಮುಖ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಅದರಲ್ಲೂ ಮೊಳಕೆಯೊಡೆದ ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದನ್ನು ಮಕ್ಕಳ ಆಹಾರದೊಂದಿಗೂ ಸೇರಿಸಬಹುದು. ಇದನ್ನು ಪುಡಿ ಮಾಡಿ ಮಕ್ಕಳಿಗೂ ನೀಡಬಹುದು.

ಇಂದಿನ ಕಾಲದಲ್ಲಿ, ವಯಸ್ಕರಿಂದ ಹಿಡಿದು ಮಕ್ಕಳವರೆಗೆ ಪ್ರತಿಯೊಬ್ಬರಿಗೂ ಪೋಷಕಾಂಶಗಳು ಅತ್ಯಗತ್ಯ. ಅದನ್ನು ಪೂರೈಸುವಲ್ಲಿ ರಾಗಿಯು ನಿಮಗೆ ಸಹಾಯ ಮಾಡುತ್ತದೆ. ರಾಗಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು, ರಾಗಿ ಮೊಳಕೆಯ ಕೆಲವು ಪ್ರಮುಖ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.

1. ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿದೆ: ಹಲವು ಪ್ರಮುಖ ಅಮೈನೋ ಆಮ್ಲಗಳು ರಾಗಿಯಲ್ಲಿ ಕಂಡುಬರ...