ಭಾರತ, ಫೆಬ್ರವರಿ 1 -- ನವದೆಹಲಿ (ಫೆಬ್ರವರಿ 1): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ (ಫೆ.1) ಮಂಡಿಸಿದ ತನ್ನ 8ನೇ ಕೇಂದ್ರ ಬಜೆಟ್​​ನಲ್ಲಿ ಕ್ರೀಡೆಗೆ ಮೀಸಲಿಡುವ ಮೊತ್ತವನ್ನು 351.98 ಕೋಟಿ ರೂ.ಗಳಷ್ಟು ಗಣನೀಯವಾಗಿ ಹೆಚ್ಚಿಸಿರುವುದಾಗಿ ಘೋಷಿಸಿದ್ದಾರೆ. ತಳಮಟ್ಟದ ಕ್ರೀಡಾಪಟುಗಳನ್ನು ಗುರುತಿಸುವ, ಪ್ರೋತ್ಸಾಹಿಸುವ ಖೇಲೋ ಇಂಡಿಯಾ ಸಿಂಹಪಾಲು ಪಡೆದಿರುವುದು ವಿಶೇಷ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ 200 ಕೋಟಿ ರೂ ಹೆಚ್ಚಿಸಲಾಗಿದೆ.

ಖೇಲೋ ಇಂಡಿಯಾ 2024-25ರ ಸಾಲಿನಲ್ಲಿ 800 ಕೋಟಿ ರೂಪಾಯಿ ಅನುದಾನ ಪಡೆದಿತ್ತು. ಆದರೆ, 2025-26ರ ಹಣಕಾಸು ವರ್ಷಕ್ಕೆ 1,000 ಕೋಟಿ ರೂ ಘೋಷಿಸಿದೆ. ಒಟ್ಟಾರೆ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ 3,794.30 ಕೋಟಿ ರೂಪಾಯಿಯನ್ನು ಕೇಂದ್ರ ಬಜೆಟ್​ನಲ್ಲಿ ಘೋಷಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಒಲಿಂಪಿಕ್ಸ್, ಕಾಮನ್​​ವೆಲ್ತ್​ ಅಥವಾ ಏಷ್ಯನ್ ಗೇಮ್ಸ್​ ನಡೆಯದ ಕಾರಣ ಯಾವುದೇ ಕ್ರೀಡಾಕೂಟಗಳಿಲ್ಲ ಎಂದು ಪರಿಗಣಿಸಿ ಈ ಹೆಚ್ಚಳಕ್ಕೆ ಕಾರ...