ಭಾರತ, ಜನವರಿ 28 -- ಸ್ಪೈಡರ್‌ಮ್ಯಾನ್‌ ಸಿನಿಮಾ ಎಂದರೆ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಜೇಡರ ಬಲೆಯಲ್ಲೇ ಹಾರುತ್ತ ನೆಗೆಯುತ್ತ ಸಾಗುವ ಸ್ಪೈಡರ್‌ಮ್ಯಾನ್‌ ಎಂಬ ಸೂಪರ್‌ಹೀರೋ ಸಿನಿಮಾದ ನಾಲ್ಕನೇ ಅಧ್ಯಾಯ ಯಾವಾಗ ಬರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಇದಕ್ಕೂ ಮುನ್ನ ಸ್ಪೈಡರ್‌ ಮ್ಯಾನ್‌ ನೋ ವೇ ಹೋಮ್‌ ಬಿಡುಗಡೆಯಾಗಿತ್ತು. ಇದೀಗ ಸ್ಪೈಡರ್‌ಮ್ಯಾನ್‌ನ ಮುಂದಿನ ಆವೃತ್ತಿಯ ಕುರಿತು ಕೆಲಸ ಕಾರ್ಯಗಳು ಆರಂಭವಾಗಿವೆ. ಈ ಹಿಂದೆ ಬಿಡುಗಡೆಯಾದ ನೋ ವೇ ಹೋಮ್‌ನಲ್ಲಿ ಕಥೆ ಮುಂದುವರೆಯುವ ಸುಳಿವು ಇತ್ತು. ಇತ್ತೀಚೆಗೆ ಟಾಮ್‌ ಹಾಲೆಂಡ್‌ ಅವರು "ಸ್ಪೈಡರ್‌ ಮ್ಯಾನ್‌ 4 ಚಿತ್ರದ ಕಥೆ ರಚಿಸಲಾಗುತ್ತಿದೆ" ಎಂಬ ಸುಳಿವು ನೀಡಿದ್ದಾರೆ.

ಸ್ಪೈಡರ್‌ಮ್ಯಾನ್‌ ಸಾಹಸದ ಮುಂದಿನ ಅಧ್ಯಾಯದ ಕುರಿತು ಒಂದಿಷ್ಟು ವಿವರಗಳನ್ನು ಇಲ್ಲಿ ನೀಡಲಾಗಿದೆ. ಅಂದರೆ, ಸ್ಪೈಡರ್‌ ಮ್ಯಾನ್‌ 4 ನಿರೀಕ್ಷಿತ ಬಿಡುಗಡೆ ದಿನಾಂಕ, ಪಾತ್ರವರ್ಗದ ವಿವರ, ಕಥೆ ಏನಿರಬಹುದು ಇತ್ಯಾದಿ ವಿವರಗಳನ್ನು ಪಡೆಯೋಣ.

ಇದನ್ನು ಓದಿ: ಕೇಸ್‌ ಆಫ್‌ ಕೊಂಡಾಣ ಸಿನ...