Bangalore, ಫೆಬ್ರವರಿ 2 -- Space Technology: ಭಾನುವಾರ ರಾತ್ರಿ ಆಕಾಶದಲ್ಲಿ ನಿಮಗೆ ವಿಶೇಷವಾದ ವಿದ್ಯಮಾನವೊಂದು ಕಾಣಿಸಲಿದೆ. ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮುಂತಾದ ಏಳು ಮಂದಿ ಗಗನಯಾತ್ರಿಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎಂದು ಕರೆಯಲಾಗುವ ಐಎಸ್ಎಸ್ ಉಪಗ್ರಹವು( International Space Station) ಭೂಮಿಯ ಮೇಲೆ ಹಾದು ಹೋಗಲಿದೆ. ಆ ದೃಶ್ಯವನ್ನು ನೀವು ಬರಿಗಣ್ಣಿನಿಂದಲೇ ಸುಲಭವಾಗಿ ನೋಡಬಹುದು. ಈ ಉಪಗ್ರಹವು ರಾತ್ರಿ 7:26ಕ್ಕೆ ಉತ್ತರದಲ್ಲಿ ಉದಯಿಸಿ, ಹತ್ತು ನಿಮಿಷದ ನಂತರ ಅಂದರೆ ರಾತ್ರಿ 7:36ಕ್ಕೆ ಪೂರ್ವದಲ್ಲಿ ಅಸ್ತಮಿಸುತ್ತದೆ. ನಿಖರವಾಗಿ 7:31ಕ್ಕೆ ಮಂಗಳ ಗ್ರಹದ ಹತ್ತಿರ ವೇಗವಾಗಿ ದಾಟಿ ಹೋಗುತ್ತದೆ. ಸುಮಾರು ಹತ್ತು ನಿಮಿಷಗಳ ಕಾಲಮಾತ್ರ ಕಾಣುವ ಐಎಸ್‌ಎಸ್‌ ಉಪಗ್ರಹ ಭೂಮಿಯ ಮೇಲೆ ಚಲಿಸುವುದನ್ನು ಅಪರೂಪದ ಈ ದೃಶ್ಯವನ್ನು ಖಂಡಿತ ಎಲ್ಲರೂ ನೋಡಬಹುದು.

ಈಗಾಗಲೇ ನೀವು, ಸಂಜೆಗತ್ತಲು ಆವರಿಸಿದೊಡನೆ, ಪೂರ್ವದ ಆಕಾಶದಲ್ಲಿ ಮಂಗಳ ಗ್ರಹವನ್ನು ಕಂಡಿರುವಿರಿ. ಆಗಸದತ್ತ ತಲೆಯೆತ್ತಿ ನೋಡಿದರ...