ಭಾರತ, ಫೆಬ್ರವರಿ 13 -- ಮಾಘ ಮಾಸದಲ್ಲಿ ಯಾವುದೇ ಪೂಜೆಯನ್ನು ಮಾಡಿದರು ವಿಶೇಷವಾದ ಫಲಗಳು ದೊರೆಯುತ್ತವೆ. ಶಿವ ಪಾರ್ವತಿಯರ ಪೂಜೆಯಿಂದ ಮನದ ಆಸೆ ಆಕಾಂಕ್ಷಿಗಳು ಪೂರ್ಣಗೊಳ್ಳುತ್ತವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಫೆಬ್ರವರಿ ತಿಂಗಳ 10ನೇ ದಿನಾಂಕದಂದು ಪ್ರದೋಷವಿರುತ್ತದೆ. ಸೋಮವಾರ ಆದ ಕಾರಣ ಇದನ್ನು ಸೋಮ ಪ್ರದೋಷ ಕರೆಯುತ್ತೇವೆ. ಈ ದಿನದಂದು ತ್ರಯೋದಶಿಯು 7.08 ರವರೆಗು ಇರುತ್ತದೆ. ಆದ್ದರಿಂದ 7.08ಕ್ಕೆ ಮುನ್ನ ಪೂಜೆಯನ್ನು ಆರಂಭಿಸಬೇಕು. ಪುಷ್ಯ ನಕ್ಷತ್ರವು ಆರಂಭವಾಗಿರುತ್ತದೆ. ಆದ್ದರಿಂದ ಇಂದಿನ ಪೂಜೆಯಿಂದ ಉತ್ತಮ ಆರೋಗ್ಯ ದೊರೆಯುತ್ತದೆ. ಅಪಮೃತ್ಯು ಪರಿಹಾರವಾಗುತ್ತದೆ. ಅಗತ್ಯ ಇರುವವರಿಗೆ ಕಪ್ಪು ಬಟ್ಟೆ ಮತ್ತು ಎಳ್ಳಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದಾನವಾಗಿ ನೀಡಿದರೆ ಅಸುನೀಗಿದ ವಂಶದ ಹಿರಿಯರ ಆಶೀರ್ವಾದವು ದೊರೆಯುತ್ತದೆ. ಶ್ರೀ ಮಹಾ ಮೃತ್ಯುಂಜಯ ಮಂತ್ರದ ಜಪವನ್ನು ಮಾಡಲು ಸೂಕ್ತವಾದ ದಿನವಾಗಿದೆ.

ಈ ದಿನ ರುದ್ರಪಾರಾಯಣದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದಲ್ಲಿನ ಭಿನ್...