Banglore, ಮಾರ್ಚ್ 26 -- Solar Eclipse 2025: ಮಾರ್ಚ್ 29, 2025 ರ ಶನಿವಾರ ಫಾಲ್ಗುಣ ಮಾಸದ ಅಮಾವಾಸ್ಯೆ ಉತ್ತರಾಭಾದ್ರ ನಕ್ಷತ್ರದಲ್ಲಿದ್ದಾಗ, ರಾಹುಗ್ರಸ್ತದ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ ಮತ್ತು ಸೂರ್ಯ, ಚಂದ್ರ ಮತ್ತು ರಾಹು ಮೀನ ರಾಶಿಯಲ್ಲಿದ್ದಾರೆ. ಈ ಸೂರ್ಯಗ್ರಹಣ ಭಾರತದಲ್ಲಿ ಸಂಭವಿಸುವುದಿಲ್ಲ. ಈ ಸಂಪೂರ್ಣ ಸೂರ್ಯಗ್ರಹಣ ಭಾರತದಲ್ಲಿ ಸಂಭವಿಸದ ಕಾರಣ ಭಾರತದ ಜನರು ಈ ಸೂರ್ಯಗ್ರಹಣ ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲ. ಭಾರತದಲ್ಲಿ ದೇವಾಲಯಗಳನ್ನು ಮುಚ್ಚುವ ಅಗತ್ಯವಿಲ್ಲ.

ಈ ಸಂಪೂರ್ಣ ಸೂರ್ಯಗ್ರಹಣವು ಅಮೆರಿಕ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಕೆನಡಾ, ಯುರೋಪ್, ಆಫ್ರಿಕಾ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಗೋಚರಿಸಲಿದೆ. ಈ ಸೂರ್ಯಗ್ರಹಣವು ಉತ್ತರಭಾದ್ರ, ಮೀನ ರಾಶಿಯಲ್ಲಿ ಸಂಭವಿಸುವುದರಿಂದ ಈ ಗ್ರಹಣ ಸಂಭವಿಸುವ ದೇಶಗಳಲ್ಲಿ ವಾಸಿಸುವ ಭಾರತೀಯರು, ವಿಶೇಷವಾಗಿ ಮೀನ ಮತ್ತು ಕನ್ಯಾ ರಾಶಿಯಲ್ಲಿ ಜನಿಸಿದವರು ಈ ಗ್ರಹಣವನ್ನು ವೀಕ್ಷಿಸದಿರುವುದು ಸೂಕ್ತ.

ಅಮೆರಿಕ ಮತ್ತು ಯುರೋಪ್‌ನಂತಹ ವಿದೇಶಗಳಲ್...