ಭಾರತ, ಫೆಬ್ರವರಿ 19 -- 2025ರ ಮೊದಲ ಸೂರ್ಯಗ್ರಹಣವು ಮಾರ್ಚ್‌ ತಿಂಗಳಲ್ಲಿ ಸಂಭವಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿರಲಿದ್ದು, ಚಂದ್ರನು ಸೂರ್ಯನ ಶೇ 94ರಷ್ಟು ಭಾಗವನ್ನು ಆವರಿಸಲಿದ್ದಾನೆ. ಆ ಕಾರಣಕ್ಕೆ ಇದನ್ನು ದೊಡ್ಡ ಸೂರ್ಯಗ್ರಹಣ ಎಂದು ಕೂಡ ಕರೆಯಲಾಗುತ್ತದೆ. ಈ ಸಮಯದಲ್ಲಿ ಸೂರ್ಯಗ್ರಹಣದ ಪರಿಣಾಮ ಬೀರುವ ದೇಶಗಳು ಬಹುತೇಕ ಕತ್ತಲಾಗಲಿವೆ.

ಮಾರ್ಚ್ 29, ಶನಿವಾರದಂದು ವರ್ಷದ ಮೊದಲ ಸೂರ್ಯಗ್ರಹಣವಿರುತ್ತದೆ. ಈ ಗ್ರಹಣವು ಉತ್ತರ ಗೋಳಾರ್ಧದಿಂದ ಗೋಚರಿಸಲಿದೆ. ಯುರೋಪ್‌ ಖಂಡದ ಹೆಚ್ಚಿನ ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರಿಸುತ್ತದೆ. ಉತ್ತರ ಅಮೆರಿಕದ ಪೂರ್ವ ಭಾಗದಲ್ಲಿ ವಾಸಿಸುವ ಜನರು ಅದನ್ನು ಸುಲಭವಾಗಿ ನೋಡಲು ಸಾಧ್ಯವಾಗುತ್ತದೆ.

ಮೊದಲೇ ಹೇಳಿದಂತೆ ಮಾರ್ಚ್ 29 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಇದು UTC ಸಮಯ 8.50 ರಿಂದ 12.43 ರವರೆಗೆ (EDT ಸಮಯ 4.50 ರಿಂದ 8.43 ರವರೆಗೆ) ಗೋಚರಿಸುತ್ತದೆ. ಡೇಟ್ ಅಂಡ್ ಟೈಮ್‌ ವೆಬ್‌ಸೈಟ್ ಪ್ರಕಾರ, 814 ಮಿಲಿಯನ್ ಜನರು ಈ ಭಾಗಶಃ ಸೂರ್ಯಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್...