Bengaluru, ಜನವರಿ 31 -- ಸುಲಭ ದರದಲ್ಲಿ ಇಂಟರ್‌ನೆಟ್ ಮತ್ತು ಕಡಿಮೆ ದರದಲ್ಲಿ ಸ್ಮಾರ್ಟ್‌ಫೋನ್‌ಗಳು ಈಗ ದೊರೆಯುತ್ತದೆ. ಇದರಿಂದಾಗಿ ಯುವಜನತೆಯ ಸೋಶಿಯಲ್ ಮೀಡಿಯಾ ಬಂಧನಕ್ಕೆ ಕೊನೆಯೇ ಇಲ್ಲದಂತಾಗಿದೆ. ಏನಾದರೂ ಕೆಲಸ ಮಾಡುತ್ತಿದ್ದರೂ ಫೋನ್ ಕೈಯಲ್ಲಿ ಇರಬೇಕು, ಏನೂ ಕೆಲಸ ಮಾಡದೇ ಇದ್ದರೂ ಫೋನ್ ಕೈಯಲ್ಲಿರಬೇಕು ಎನ್ನುವಂತಾಗಿದೆ ನಮ್ಮ ಸ್ಥಿತಿ. ಅಗತ್ಯ ಇರಲಿ, ಇಲ್ಲದಿರಲಿ, ಸದಾ ಏನಾದರೊಂದು ಕೆಲಸಕ್ಕೆ ಫೋನ್ ಬಳಸುತ್ತಿರುತ್ತೇವೆ. ಆದರೆ ಆ ರೀತಿ ಸಮಯ ಕಳೆಯಲು, ಬೋರ್ ಹೋಗಲಾಡಿಸಲು ಮಾಡಿಕೊಂಡ ಅಭ್ಯಾಸದಿಂದ ಇಂದು ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಮೇಲ್ನೋಟಕ್ಕೆ ಗಂಭೀರ ಅನ್ನಿಸದಿದ್ದರೂ, ಇದರಿಂದ ವ್ಯಕ್ತಿಯ ದೈಹಿಕ ಚಟುವಟಿಕೆ ಮೇಲೆ ಭವಿಷ್ಯದಲ್ಲಿ ಖಂಡಿತಾ ಸಮಸ್ಯೆ ಎದುರಾಗುತ್ತದೆ. ಎಷ್ಟೇ ಬಿಝಿಯ ಕೆಲಸ ಮಾಡುತ್ತಿದ್ದರೂ, ಟಿಂಗ್ ಎಂದು ಸೋಶಿಯಲ್ ಮೀಡಿಯಾದ ನೋಟಿಫೀಕೇಶನ್ ಬಂದರೆ ಮುಗಿಯಿತು. ಫೋನ್ ಕೈಗೆತ್ತಿಕೊಂಡರೆ ಗಂಟೆಗಳು ಉರುಳಿದ್ದೇ ಗೊತ್ತಾಗಲ್ಲ.

ಈಗ ಫೇಸ್‌ಬುಕ್‌ನ ಹುಚ್ಚು ಜನರಿಗೆ ಕಡಿಮೆಯಾಗಿದೆ. ಇನ್‌ಸ್ಟಾಗ್...