Bengaluru, ಫೆಬ್ರವರಿ 13 -- ನೀವು ಕೂಡ ಶೌಚಾಲಯಕ್ಕೆ ಹೋಗುವಾಗ ಜತೆಯಲ್ಲಿ ಫೋನ್ ತೆಗೆದುಕೊಂಡು ಹೋಗುವುದನ್ನು ಅಭ್ಯಾಸ ಮಾಡಿದ್ದೀರಾ? ಫೋನ್ ಜತೆಗೆ ಒಯ್ಯದಿದ್ದರೆ ಮನಸ್ಸಿಗೆ ಸಮಾಧಾನವಾಗುವುದಿಲ್ಲವೇ? ಆದರೆ ಶೌಚಾಲಯಕ್ಕೆ ಹೋಗುವಾಗ ಫೋನ್ ತೆಗೆದುಕೊಂಡು ಹೋಗುವುದು ಮತ್ತು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಅಲ್ಲಿಯೇ ಕೂರುವುದರಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಫೋನ್‌ನಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಗಮನ ಬೇರೆಡೆ ಸೆಳೆಯಬಹುದು ಮತ್ತು ದೀರ್ಘಕಾಲದ ಕರುಳಿನ ಒತ್ತಡದ ಸಮಸ್ಯೆಗೆ ಕಾರಣವಾಗಬಹುದು. ಶೌಚಾಲಯದಲ್ಲಿ ಫೋನ್ ಬಳಸುವುದನ್ನು ವೈದ್ಯರು ಮಾತ್ರವಲ್ಲ, ನಮ್ಮ ಸ್ವಂತ ತಾಯಂದಿರು ಕೂಡ ವಿರೋಧಿಸುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಿಮ್ಮ ತಾಯಿಯ ಮಾತನ್ನು ಕೇಳಲು ಮತ್ತು ಈ ಕೆಟ್ಟ ಅಭ್ಯಾಸವನ್ನು ತ್ಯಜಿಸಲು ಕೆಲವು ಕಾರಣಗಳು ಇಲ್ಲಿವೆ.

ಶೌಚಾಲಯದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯ ಅಭ್ಯಾಸದಿಂದ ಓರ್ವ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತ...