ಭಾರತ, ಮಾರ್ಚ್ 14 -- Smartphone Addiction: ಸ್ಮಾರ್ಟ್‌ಫೋನ್‌, ಇಂದು ಜಗತ್ತಿನ ಬಹುತೇಕರ ಸಂಗಾತಿಯಂತಾಗಿದೆ. ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಸ್ಮಾರ್ಟ್‌ಫೋನ್ ಬಳಸುವವರೇ. ಮಾತ್ರವಲ್ಲ ಶೇ 80 ರಷ್ಟು ಮಂದಿ ಇದಕ್ಕೆ ಅಡಿಕ್ಟ್ ಆಗಿದ್ದಾರೆ. ಈ ಸ್ಮಾರ್ಟ್‌ಫೋನ್ ನಮ್ಮ ಒತ್ತಡದ ಜೀವನಶೈಲಿಯ ಭಾಗವೂ ಆಗಿದೆ. ಒಂದು ಕ್ಷಣ ಕೂಡ ಫೋನ್ ಇಲ್ಲದೇ ಇರಲು ನಮ್ಮಿಂದ ಸಾಧ್ಯವಿಲ್ಲ, ಅಷ್ಟರ ಮಟ್ಟಿಗೆ ನಾವು ಅದರ ಜೊತೆ ಅಟ್ಯಾಚ್‌ಮೆಂಟ್ ಬೆಳೆಸಿಕೊಂಡಿದ್ದೇವೆ. ಆದರೆ ಸತತ 3 ದಿನಗಳ ಕಾಲ ಸ್ಮಾರ್ಟ್‌ಫೋನ್ ಬಳಸದೇ ಇದ್ದರೆ ಏನಾಗಬಹುದು?

ಅದೆಲ್ಲಾ ಅಸಾಧ್ಯ, ಫೋನ್ ಬಳಸದೇ ಇರಲು ಹೇಗೆ ಸಾಧ್ಯ, ಅದು ನಿರಂತರವಾಗಿ 3 ದಿನಗಳ ಕಾಲ ಫೋನ್‌ ಇಲ್ಲದೇ ಇರಲು ಸಾಧ್ಯವಾಗುವುದೇ ಅಂತೆಲ್ಲಾ ನೀವು ಯೋಚಿಸಬಹುದು. ಆದರೆ ನಿರಂತರವಾಗಿ ಮೂರು ದಿನಗಳ ಕಾಲ ಸ್ಮಾರ್ಟ್‌ಫೋನ್ ಬಳಸಿಲ್ಲ ಎಂದರೆ ನಮ್ಮ ಮನಸ್ಥಿತಿಯೇ ಬದಲಾಗಬಹುದಂತೆ, ಹಾಗಂತ ಇದನ್ನು ನಾವು ಹೇಳುತ್ತಿರುವುದಲ್ಲ, ಇತ್ತೀಚಿನ ಅಧ್ಯಯನವೊಂದು ಈ ವಿಚಾರವನ್ನು ಬಹಿರಂಗ ಮಾಡಿದೆ.

ಇತ್ತೀಚೆಗೆ ಕಂಪ್ಯೂ...