Bengaluru, ಮಾರ್ಚ್ 9 -- ಫೋನ್‌ಗೆ ಅಗತ್ಯವಾದ ಅಕ್ಸೆಸ್ಸರಿನೀವು ಸ್ಮಾರ್ಟ್‌ಫೋನ್ ಖರೀದಿಸಿ ಅದರ ಜೊತೆ ಅಗತ್ಯ ಅಕ್ಸೆಸ್ಸರಿ ಖರೀದಿಸದಿದ್ದರೆ, ತುರ್ತು ಸಂದರ್ಭದಲ್ಲಿ ಸಮಸ್ಯೆಯಾಗಬಹುದು. ಸ್ಮಾರ್ಟ್‌ಫೋನ್ ಜತೆ ಈಗ ಬಾಕ್ಸ್‌ನಲ್ಲಿ ಚಾರ್ಜರ್, ಇಯರ್‌ಫೋನ್, ಬ್ಯಾಕ್ ಕವರ್ ಮಾಯವಾಗಿದೆ. ಹೀಗಾಗಿ ಫೋನ್ ಕೊಳ್ಳುವಾಗ ಅವುಗಳನ್ನು ಪ್ರತ್ಯೇಕವಾಗಿ ಖರೀದಿಸಬೇಕಿದೆ. ಹೊಸ ಫೋನ್ ಜತೆಗೆ ನಿಮಗೆ ಅಗತ್ಯವಾಗಿ ಬೇಕಾಗುವ ಗ್ಯಾಜೆಟ್ಸ್, ಅಕ್ಸೆಸ್ಸರಿಗಳ ಪಟ್ಟಿ ಇಲ್ಲಿದೆ ನೋಡಿ.

ಫೋನ್ ಕೇಸ್ ಅಥವಾ ಬ್ಯಾಕ್ ಕವರ್ಹೊಸ ಫೋನ್ ಅನ್ನು ಸುರಕ್ಷಿತವಾಗಿಡಲು ಮತ್ತು ಅದಕ್ಕೆ ವಿಶೇಷ ನೋಟವನ್ನು ನೀಡಲು ರಕ್ಷಣಾತ್ಮಕ ಕೇಸ್ ಅಥವಾ ಹಿಂಭಾಗದ ಕವರ್ ಉಪಯುಕ್ತವಾಗಿದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಮತ್ತು ಬಜೆಟ್‌ಗೆ ಅನುಗುಣವಾಗಿ ನೀವು ಫೋನ್ ಕೇಸ್‌ ಮತ್ತು ಕವರ್‌ ಆಯ್ಕೆ ಮಾಡಬಹುದು.

ಸ್ಕ್ರೀನ್ ಪ್ರೊಟೆಕ್ಟರ್, ಟ್ಯಾಂಪರ್ ಗ್ಲಾಸ್ಸ್ಮಾರ್ಟ್‌ಫೋನ್ ಡಿಸ್ಪ್ಲೇಯನ್ನು ಗೀರುಗಳಿಂದ ರಕ್ಷಿಸಲು ಸ್ಕ್ರೀನ್ ಪ್ರೊಟೆಕ್ಟರ್ ಹಾಕಿಸುವುದು ಸಹ ಮುಖ್ಯವಾಗಿದೆ. ಇದು ...