ಭಾರತ, ಮಾರ್ಚ್ 12 -- Sleeping Tips: ಇಂದಿನ ಯುವಪೀಳಿಗೆ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿದ್ರಾಹೀನತೆ ಕೂಡ ಒಂದು, ಇದು ಸಾಮಾನ್ಯವಾದರೂ ಇದರಿಂದ ಇಲ್ಲದ ಆರೋಗ್ಯ ಸಮಸ್ಯೆಗಳು ಜೊತೆಯಾಗುತ್ತಿವೆ. ಮಲಗಿ ಗಂಟೆಯಾದ್ರೂ ನಿದ್ದೆ ಬರೋಲ್ಲ, ಏನೆಲ್ಲಾ ಪ್ರಯತ್ನ ಮಾಡಿದ್ರೂ ನಿದ್ದೆ ಕಣ್ಣ ಹತ್ತಿರಕ್ಕೂ ಸುಳಿಯೊಲ್ಲ ಅಂತ ದೂರು ಹೇಳುವವರೇ ಜಾಸ್ತಿ.

ನಿದ್ದೆ ಸರಿಯಾಗಿ ಬಂದಿಲ್ಲ ಅಂದ್ರೆ ಮರುದಿನ ಬೆಳಿಗ್ಗೆ ಅಲಸ್ಯ ನಮ್ಮನ್ನು ಕಾಡಬಹುದು. ಗುಣಮಟ್ಟದ ನಿದ್ದೆಯ ಕೊರತೆಯು ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವಂತೆ ಮಾಡಬಹುದು. ಸಾಕಷ್ಟು ನಿದ್ರೆ ದೇಹಕ್ಕೆ ಮಾತ್ರವಲ್ಲ, ಚರ್ಮ ಮತ್ತು ಮಾನಸಿಕ ಆರೋಗ್ಯಕ್ಕೂ ಅಗತ್ಯ. ನೀವು ನಿದ್ದೆ ಬಾರದೇ ಒದ್ದಾಡುತ್ತಿದ್ದರೆ ಈ 11 ಸಲಹೆ ಪಾಲಿಸಿ. ಮಲಗಿದ ತಕ್ಷಣ ನಿದ್ದೆ ಬರುತ್ತೆ, ಟ್ರೈ ಮಾಡಿ.

ಚೆನ್ನಾಗಿ ನಿದ್ರೆ ಮಾಡಲು, ನೀವು ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ವಾರಾಂತ್ಯದಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿಯೂ ಸಹ ನಿಮ್ಮ ನಿದ್ದೆಯ ವೇಳಾಪಟ್ಟಿಯನ್...