Bengaluru, ಫೆಬ್ರವರಿ 11 -- ಜೀವನಶೈಲಿ ಮತ್ತು ಕೆಲಸದ ಒತ್ತಡ, ಕಾರ್ಪೋರೇಟ್ ಬದುಕಿನ ಪರಿಣಾಮ ಹಲವು ರೀತಿಯ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಅದರಲ್ಲಿ ಮಧ್ಯಾಹ್ನದ ಆಯಾಸವೂ ಒಂದು. ನಿಮಗೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿರುವಾಗ ಮಧ್ಯಾಹ್ನದ ಸಮಯದಲ್ಲಿ ಆಯಾಸವಾಗುತ್ತಿದೆಯೇ? ದೇಹವು ಹಗಲಿನಲ್ಲಿ ಕಡಿಮೆ ಶಕ್ತಿಯ ಮಟ್ಟವನ್ನು ಅನುಭವಿಸಿದಾಗ ಜನರು ಎದುರಿಸುವ ಸಾಮಾನ್ಯ ಸಮಸ್ಯೆ ಇದು. ಇದು ಏಕೆ ಸಂಭವಿಸುತ್ತಿರಬಹುದು ಎನ್ನುವುದಕ್ಕೆ ವೈದ್ಯರು ನೀಡುವ ಕಾರಣ ಇಲ್ಲಿದೆ. ಮಧ್ಯಾಹ್ನ 1 ಗಂಟೆ ಸಮಯದಲ್ಲೇ ದೇಹವು ಜೋತು ಬೀಳುತ್ತಿರುವಂತೆ ಅನ್ನಿಸುತ್ತದೆ. ಬೆಳಗನ್ನು ನಾವು ಅತ್ಯಂತ ಹೆಚ್ಚಿನ ಉತ್ಸಾಹದಿಂದ ಪ್ರಾರಂಭಿಸಿರುತ್ತೇವೆ, ಆದರೆ ಮಧ್ಯಾಹ್ನವೇ ಏಕೆ ನಮಗೆ ದಣಿವು ಕಾಣಿಸುತ್ತದೆ, ಸೋಮಾರಿತನ ಮತ್ತು ನಿದ್ರಾಹೀನತೆಯಾಗಿದೆ ಎಂದು ಅನಿಸುತ್ತದೆ? ಇದನ್ನು ಮಧ್ಯಾಹ್ನದ ನಿಶ್ಯಕ್ತಿ ಅಥವಾ ಮಧ್ಯಾಹ್ನದ ಆಯಾಸ ಎನ್ನುತ್ತಾರೆ.

ನಮ್ಮ ದೇಹದ ಜೈವಿಕ ಗಡಿಯಾರವನ್ನು ಗಮನಿಸಿದಾಗ, ಸರ್ಕಾಡಿಯನ್ ಲಯ ಮತ್ತು ನಿದ್ರೆಯ ಒತ್ತಡವು ಮಧ್...