ಭಾರತ, ಏಪ್ರಿಲ್ 26 -- ಉತ್ತಮ ಆರೋಗ್ಯಕ್ಕೆ ನಿದ್ದೆ ಬಹಳ ಮುಖ್ಯ. ಯಾವುದೇ ಅಡಚಣೆಯಿಲ್ಲದ ಶಾಂತ ಹಾಗೂ ದೀರ್ಘಕಾಲದ ನಿದ್ದೆಯಿಂದ ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದರೆ ನಿದ್ದೆಯ ಕೊರತೆಯು ಹಲವು ರೀತಿಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ನಿದ್ರೆಯ ಕೊರತೆಯು ಸಾವಿಗೆ ನಮ್ಮನ್ನು ಹತ್ತಿರವಾಗಿಸುವುದು ಸುಳ್ಳಲ್ಲ.

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಗೆ ಮೊಬೈಲ್ ಫೋನ್ ಪ್ರಮುಖ ಕಾರಣ. ಯುವಜನರು ಮಧ್ಯರಾತ್ರಿಯ ನಂತರವೂ ಸೆಲ್ ಫೋನ್ ಬಳಸುತ್ತಾರೆ. ಇದರಿಂದ ನಿದ್ರೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ ಎಂದು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ವಯಸ್ಸಾದವರು, ದೈಹಿಕ ಸಮಸ್ಯೆಗಳಿಂದ ಬಳಲುವವರು, ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವವರು ಈ ಹಲವು ಕಾರಣಗಳು ನಿದ್ರೆಯ ಮೇಲೆ ಪರಿಣಾಮ ಸಾಕಷ್ಟು ಬೀರುತ್ತದೆ.

3 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಕನಿಷ್ಠ 10 ರಿಂದ 13 ಗಂಟೆಗಳ ನಿದ್ದೆ ಬೇಕು. 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕನಿಷ್ಠ 9 ರಿಂದ 12 ಗಂಟೆಗಳ ನಿದ್ದೆ ಬೇಕು. 13 ರಿಂದ...